ಮನುಕುಲದ ಅಭಿವೃದ್ಧಿಯೇ ಧರ್ಮಗಳ ಉದ್ದೇಶ : ಸಿಎಂ ಬೊಮ್ಮಾಯಿ

ಬೆಂಗಳೂರು,ಅ.8- ಎಲ್ಲ ಧರ್ಮಗಳ ಉದ್ದೇಶ ಮಾನವಕುಲದ ಅಭಿವೃದ್ಧಿಯೇ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಧರ್ಮ ಮನುಷ್ಯನಿಂದ ಮಾನವನ ಕಡೆಗೆ ಹೋಗುವುದೇ ಸ್ವರ್ಗ. ನಮ್ಮ ದೇಶಕ್ಕೆ ಐದು ಸಾವಿರ ವರ್ಷದ ಚರಿತ್ರೆ ಇದೆ. ನಮ್ಮ ಸಂಸ್ಕøತಿ ಪರಂಪರೆಯನ್ನು ಪಾಲಿಸಿದಾಗ ಸಾರ್ಥಕತೆ ಬರುತ್ತದೆ ಎಂದರು. ರಾಷ್ಟ್ರೀಯ ಬಸವ ಪ್ರತಿಷ್ಠಾನ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಸವ ಪ್ರತಿಷ್ಠಾನದ ಸರ್ವಧರ್ಮ ಸಂಸತ್ – 2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹುಟ್ಟುವಾಗ ನಮಗೆ ಯಾವುದೇ ಧರ್ಮ […]