ನನಗೆ ನಾಡಿನ ಎಲ್ಲ ಮಠಾಧೀಶರ ಬಗ್ಗೆ ಅಪಾರವಾದ ಗೌರವವಿದೆ :ಸಚಿವ ನಿರಾಣಿ

ಕಲಬುರಗಿ,ಜ.26-ನನಗೆ ನಾಡಿನ ಎಲ್ಲ ಮಠಾಧೀಶರು ಮತ್ತು ಧಾರ್ಮಿಕ ಕೇಂದ್ರಗಳ ಬಗ್ಗೆ ಅಪಾರವಾದ ಗೌರವವಿದೆ. ಯಾವುದೇ ಸಂದರ್ಭದಲ್ಲೂ ನಾವು ಯಾರ ಬಗ್ಗೆಯೂ ಅಗೌರವವಾಗಿ ನಡೆದುಕೊಂಡಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ನಾನು ಮಠಾೀಶರು ಮತ್ತು ಮಠಗಳ ಬಗ್ಗೆ ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದೇನೆ. ಎಂದಿಗೂ ಯಾರ ಬಗ್ಗೆಯೂ ಲಘುವಾಗಿ ಮಾತನಾಡಿಲ್ಲ. ಪಂಚಮಸಾಲಿ ಮಾತ್ರವಲ್ಲದೆ ಎಲ್ಲ ಮಠಗಳ ಬಗ್ಗೆಯೂ ಅದೇ ಗೌರವವಿದೆ ಎಂದು ಪುನರುಚ್ಚರಿಸಿದರು. ಪಂಚಮಸಾಲಿ ಪೀಠದ ಬಗ್ಗೆಯೂ […]