ರಾಹುಲ್ ವಿರುದ್ಧ ದಾವೆ ಹೂಡ್ತಾರಂತೆ ಲಲಿತ್ ಮೋದಿ

ನವದೆಹಲಿ,ಮಾ.30- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರು ರಾಹುಲ್ ಗಾಂಧಿ ಅವರನ್ನು ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿರುವ ಹೇಳಿಕೆಗಳ ವಿರುದ್ಧ ಯುಕೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಘೋಷಿಸಿದ್ದಾರೆ. ಐಪಿಎಲ್‍ನಲ್ಲಿ ಹಣಕಾಸು ಅವ್ಯವಹಾರದ ಆರೋಪಗಳನ್ನು ಎದುರಿಸಿದ ನಂತರ 2010 ರಿಂದ ಲಂಡನ್‍ನಲ್ಲಿ ವಾಸಿಸುತ್ತಿರುವ ಮೋದಿ ಅವರು ಟ್ವಿಟರ್‍ನಲ್ಲಿ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ತಮ್ಮನ್ನು ತಾವು ಸಂಪೂರ್ಣವಾಗಿ ಮೂರ್ಖರಾಗುವುದನ್ನು ನೋಡಲು ಎದುರು ನೋಡುತ್ತಿದ್ದೇನೆ ಎಂದು ಅವರು ಕಿಡಿ ಕಾರಿದ್ದಾರೆ. […]
ಸಾವರ್ಕರ್ ಬಗ್ಗೆ ಕೀಳಾಗಿ ಮಾತನಾಡಿದರೆ ಮೈತ್ರಿ ಮುರಿದುಕೊಳ್ಳುತ್ತೆವೆ ಹುಷಾರ್..!

ಮಾಲೆಗಾಂವ್,ಮಾ.27- ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ಸಾವರ್ಕರ್ ಅವರ ಬಗ್ಗೆ ಕೀಳಾಗಿ ಮಾತನಾಡಿದರೆ ಮೈತ್ರಿ ಕಡಿದುಕೊಳ್ಳಬೇಕಾಗುತ್ತದೆ ಎಂದು ಉದ್ಧವ್ ಠಾಕ್ರೆ ಅವರು ರಾಹುಲ್‍ಗಾಂಧಿ ಅವರಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ನಾನು ಕ್ಷಮೆ ಕೇಳಲು ಸಾವರ್ಕರ್ ಅಲ್ಲ, ನಾನು ಗಾಂಧಿ ಎಂದು ಗುಡುಗಿದ್ದ ರಾಹುಲ್‍ಗಾಂಧಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‍ಠಾಕ್ರೆ ಅವರು ಸಾವರ್ಕರ್ ಅವರನ್ನು ನಾವು ಆರಾಧ್ಯ ದೈವ ಎಂದು ಪರಿಗಣಿಸುತ್ತೇವೆ ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ಕೀಳಾಗಿ ಮಾತನಾಡುವುದನ್ನು ನಾವು […]
ರಾಹುಲ್‍ಗಾಂಧಿ ಬೆನ್ನು ಬಿದ್ದ ದೆಹಲಿ ಪೊಲೀಸರು

ನವದೆಹಲಿ,ಮಾ.19- ಮಹಿಳೆಯೊಬ್ಬರಿಗೆ ನಿರಂತರವಾದ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಪ್ರಕರಣವೊಂದನ್ನು ಉಲ್ಲೇಖಿಸಿ ನೀಡಿದ ಹೇಳಿಕೆ ಆಧರಿಸಿ ಮಾಹಿತಿ ಕಲೆ ಹಾಕಲು ದೆಹಲಿ ಪೊಲೀಸರು ಬೆನ್ನು ರಾಹುಲ್ ಬಿದ್ದಿದ್ದಾರೆ. ಸತತವಾಗಿ ಮೂರನೇ ಬಾರಿಗೂ ಪೊಲೀಸರು ರಾಹುಲ್‍ಗಾಂಧಿಯನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಲು ಯತ್ನಿಸಿದ್ದು, ನೋಟಿಸ್ ಕೂಡ ನೀಡಿದ್ದಾರೆ. ದೇಶಾದ್ಯಂತ ಸಾವಿರಾರು ಕಿಲೋ ಮೀಟರ್ ದೂರದ ಭಾರತ್ ಜೋಡೋ ಯಾತ್ರೆ ಪಾದ ಯಾತ್ರೆ ಜನವರಿ 30ರಂದು ಕಾಶ್ಮೀರದಲ್ಲಿ ಸಮಾರೋಪಗೊಂಡಿತ್ತು. ಆ […]
ಚರ್ಚೆಗೆ ಗ್ರಾಸವಾದ ಎಚ್‍ಡಿಕೆ ಬ್ರಾಹ್ಮಣ ಟೀಕೆ

ಬೆಂಗಳೂರು,ಫೆ.7- 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಜೆಪಿ, ಆರ್‍ಎಸ್‍ಎಸ್ ಅನ್ನು ಟೀಕಿಸುವ ಭರದಲ್ಲಿ ಬ್ರಾಹ್ಮಣರ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಡಿದ ಮಾತುಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಈ ಬೆನ್ನಲ್ಲೇ ಹೆಚ್.ಡಿ ಕುಮಾರಸ್ವಾಮಿ ಅವರ ಬ್ರಾಹ್ಮಣ ಸಿಎಂ ಹೇಳಿಕೆ ಹಾಗೂ ವಿಪಕ್ಷ ನಾಯಕರ ವಾಗ್ದಾಳಿ, ಆರೋಪಗಳಿಂದ ಪಕ್ಷಕ್ಕೆ ಆಗುವ ಹಾನಿ ತಪ್ಪಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ವಿಪಕ್ಷ ನಾಯಕರ ಹೇಳಿಕೆಗಳಿಂದ ಪಕ್ಷಕ್ಕೆ ಆಗುವ ಹಾನಿ ತಡೆಯುವ ಸಲುವಾಗಿ ಬಿಜೆಪಿ ಜಾಲತಾಣಗಳ ಮೊರೆ ಹೋಗಿದೆ. […]
‘ರಾಮಚರಿತ’ ಟೀಕಿಸಿದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಒತ್ತಾಯ

ಬಲ್ಲಿಯಾ,ಜ.24- ರಾಮಚರಿತಮಾನಗಳ ಕೆಲವು ಶ್ಲೋಕಗಳು ಸಾಮಾಜಿಕ ತಾರತಮ್ಯವನ್ನು ಉತ್ತೇಜಿಸುತ್ತವೆ ಎಂದು ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ಹೇಳಿಕೆಯನ್ನು ಶಂಕರಾಚಾರ್ಯ ಪರಿಷತ್ತಿನ ಅಧ್ಯಕ್ಷ ಸ್ವಾಮಿ ಆನಂದ್ ಸ್ವರೂಪ್ ತೀವ್ರವಾಗಿ ಖಂಡಿಸಿದ್ದು, ಸಮಾಜವಾದಿ ನಾಯಕನ ವಿರುದ್ಧ ದೇಶದ್ರೋಹ ಆರೋಪದಡಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ. ಅಗ್ಗದ ಪ್ರಚಾರ ಮತ್ತು ನಿರ್ದಿಷ್ಟ ಸಮುದಾಯದ ಮತವನ್ನು ಗಳಿಸುವ ಪ್ರಯತ್ನವಾಗಿ ಮೌರ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆನಂದ್ ಸ್ವರೂಪ್ ಟೀಕಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರಮುಖ ಹಿಂದುಳಿದ ವರ್ಗಗಳ ನಾಯಕರಾಗಿರುವ […]
ಮೋದಿ ವಿರುದ್ಧ ಹೇಳಿಕೆ : ಕಾಂಗ್ರೆಸ್‍ನ ರಾಜಾ ಪಟೇರಿಯಾ ಬಂಧನ

ದಮೋಹ್ (ಮಧ್ಯಪ್ರದೇಶ)ಡಿ.13- ಪ್ರಧಾನಿ ಮೋದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ರಾಜಾ ಪಟೇರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪವಾಯಿಯಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಸಂವಿಧಾನವನ್ನು ಉಳಿಸಲು ಮೋದಿಯನ್ನು ಕೊಲ್ಲಲು ಸಿದ್ಧರಾಗಿರಿ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.ವಿಶೇಷ ಪೊಲೀಸ್ ತಂಡ ಇಂದು ಬೆಳಿಗ್ಗೆ 5.30 ರ ಸುಮಾರಿಗೆ ದಾಮೋಹ್ ಜಿಲ್ಲೆಯ ಹಟಾ ಪಟ್ಟಣದಲ್ಲಿರುವ ಪಟೇರಿಯಾ ಅವರ ನಿವಾಸಕ್ಕೆ ಹೋಗಿ ಅವರನ್ನು ಬಂಧಿಸಿದ್ದಾರೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಗಿಲಲ್ಲಿ […]
ಸತೀಶ್ ಜಾರಕಿಹೊಳಿ ವಿರುದ್ಧ ಭುಗಿಲೆದ್ದ ಆಕ್ರೋಶ

ಬೆಂಗಳೂರು,ನ.9- ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ರಾಜ್ಯಾದ್ಯಂತ ಬೀದಿಗಿಳಿದಿವೆ. ಹಿಂದೂ ಯುವ ಸೇನೆ, ಬಿಜೆಪಿ ಯುವ ಮೋರ್ಚಾ, ವಿಎಚ್‍ಪಿ ಸೇರಿದಂತೆ ಹಲವಾರು ಹಿಂದೂ ಸಂಘಟನೆಗಳು ಸತೀಶ್ ಜಾರಕಿಹೊಳಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ಬುಧವಾರವೂ ಪ್ರತಿಭಟನೆಯನ್ನು ತೀವ್ರಗೊಳಿಸಿವೆ.ರಾಜಧಾನಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ದಾಣಗೆರೆ, ಮಂಗಳೂರು ಸೇರಿದಂತೆ ಮತ್ತಿತರ ಕಡೆ ಸತೀಶ್ ಜಾರಕಿಹೊಳಿ ವಿರುದ್ಧ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಕೆಲವು ಕಡೆ […]
ಕ್ಷಮೆ ಕೇಳಲು ನಿರಾಕರಿಸಿದ ಸತೀಶ್ ಜಾರಕಿಹೊಳಿ, ತಮ್ಮದೇ ಪಕ್ಷದವರಿಗೂ ಟಾಂಗ್

ಬೆಂಗಳೂರು, ನ.9- ವಿವಾದಿತ ಹೇಳಿಕೆ ನೀಡಿ, ಅದನ್ನು ಸಮರ್ಥಿಸಿಕೊಳ್ಳುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ. ತಾವು ನೀಡಿದ್ದ ಹೇಳಿಕೆಯಲ್ಲಿ ತಪ್ಪಿಲ್ಲ, ಒಂದು ವೇಳೆ ತಪ್ಪು ಎಂದು ಸಾಬೀತು ಪಡಿಸಿ ನಾನು ಕ್ಷಮೆ ಕೇಳುವುದಷ್ಟೆ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಸಾಬೀತು ಪಡಿಸಲಾಗದಿದ್ದರೆ ನನ್ನ ವಿರುದ್ಧ ಮಾತನಾಡುವವರು ರಾಜೀನಾಮೆ ನೀಡುತ್ತಾರೆಯೇ ಎಂದು ಸತೀಶ್ ಪ್ರತಿ ಸವಾಲು ಹಾಕಿದ್ದಾರೆ. ಸತೀಶ್ ಜಾರಕಿಹೊಳಿ ಅವರು ತಿರುಗಿ ಬೀಳುವವರೆಗೂ ಬಿಜೆಪಿಯ ಎಲ್ಲಾ ನಾಯಕರು ವಿವಾದಿತ ಹೇಳಿಕೆಗಾಗಿ […]
ಜಾರ್ಖಂಡ್‍ನಲ್ಲಿ ಯಾವುದೇ ಕ್ಷಣ ಬಾಂಬ್ ಸ್ಪೋಟಿಸಬಹುದು : ರಮೇಶ್ ಬೈಸ್

ರಾಂಚಿ,ಅ.28- ಜಾರ್ಖಾಂಡ್‍ನಲ್ಲಿ ಯಾವ ಸಂದರ್ಭದಲ್ಲಿ ಬೇಕಾದರೂ ಪರಮಾಣು ಬಾಂಬ್ ಸ್ಪೋಟಿಸಬಹುದು ಎಂಬ ರಾಜ್ಯಪಾಲ ರಮೇಶ್ ಬೈಸ್ ಅವರ ಹೇಳಿಕೆ ರಾಜಕೀಯ ಸಂಚಲನ ಸೃಷ್ಟಿಸಿದೆ. ಮುಖ್ಯಮಂತ್ರಿ ಹೇಮಂತ್ ಸೂರೆನ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿರುವ ಈ ಹೇಳಿಕೆ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ರಾಯ್‍ಪುರದಲ್ಲಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಜ್ಯಪಾಲರು, ಸಿಎಂ ಸೂರೆನ್ ಪ್ರಕರಣಕ್ಕೆ ಸಂಬಂಧಿದಂತೆ ಚುನಾವಣಾ ಆಯೋಗದಿಂದ ಎರಡನೇ ಅಭಿಪ್ರಾಯ ಕೇಳಿರುವುದಾಗಿ ತಿಳಿಸಿದ್ದಾರೆ. ಆಯೋಗದ ಅಭಿಪ್ರಾಯ ಬಂದ ನಂತರ ಸಂವಿಧಾನಬದ್ಧ ಹಕ್ಕುಗಳ ಪ್ರಕಾರ ಯಾವ ನಿರ್ಧಾರ […]
ಧರ್ಮನಿಂದನೆ ಮಾಡಿದ ಬಿಜೆಪಿ ಶಾಸಕ ಅರೆಸ್ಟ್
ಹೈದರಾಬಾದ್, ಆ.23- ಪ್ರವಾದಿ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪಕ್ಕಾಗಿ ಹೈದರಾಬಾದ್ ಪೊಲೀಸರು ಬಿಜೆಪಿ ಶಾಸಕ ಟಿ.ರಾಜಾಸಿಂಗ್‍ರನ್ನು ಬಂಧಿಸಿದ್ದಾರೆ. ತೆಲಂಗಾಣದ ಹೈದರಾಬಾದ್‍ನಲ್ಲಿ ಕಳೆದ ವಾರ ಹಾಸ್ಯ ಕಲಾವಿದ ಮುನಾವರ್ ಫಾರುಕಿ ಅವರ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿತ್ತು. ಫಾರುಕಿ ಅವರ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಶಾಸಕ ರಾಜಾಸಿಂಗ್ ಬೆದರಿಕೆ ಹಾಕಿದ್ದರು, ಇಲ್ಲವಾದರೆ ಸ್ಥಳಕ್ಕೆ ತೆರಳಿ ಅಡ್ಡಿ ಪಡಿಸುವ ಬೆದರಿಕೆ ಒಡ್ಡಿದ್ದರು. ಇದರಿಂದ ಅವರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು. ಅಷ್ಟಕ್ಕೆ ಸುಮ್ಮನಾಗದ ರಾಜಾಸಿಂಗ್ ವಿಡಿಯೋ ಮಾಡಿ ಫಾರುಕಿಯನ್ನು ಟೀಕಿಸುವ ಭರದಲ್ಲಿ […]