ಶರತ್‍ಚಂದ್ರ ,ಲಾಬುರಾಮ್‍ ಸೇರಿ20 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ

ಬೆಂಗಳೂರು, ಜ.25- ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ರಾಜ್ಯದ 20 ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ಪದಕ ಲಭಿಸಿದೆ. ರಾಷ್ಟ್ರಪತಿ ಅವರ ವಿಶಿಷ್ಟ ಸೇವಾ ಪದಕಕ್ಕೆ ಸಿಐಡಿ, ಎಡಿಜಿಪಿ, ಕೆ.ವಿ. ಶರತ್ ಚಂದ್ರ ಅವರು ಭಾಜನರಾಗಿದ್ದಾರೆ. ಪೊಲೀಸ್ ಶ್ಲಾಘನೀಯ ಸೇವಾ ಪದಕ:ರಾಜ್ಯ ಗುಪ್ತವಾರ್ತೆಯ ಹೆಚ್ಚುವರಿ ನಿರ್ದೇಶಕ ಲಾಭುರಾಮ್, ಪೊಲೀಸ್ ಪ್ರಧಾನ ಕಚೇರಿಯ ಡಿವೈಎಸ್‍ಪಿ ಎಸ್. ನಾಗರಾಜು, ಕೆಎಲ್‍ಎ ಡಿವೈಎಸ್‍ಪಿಗಳಾದ ವೀರೇಂದ್ರ ಕುಮಾರ್, ಪ್ರಮೋದ್ ಕುಮಾರ್, ಕಲ್ಬುರ್ಗಿ ಕರ್ನಾಟಕ ಲೋಕಾಯುಕ್ತ ಡಿವೈಎಸ್‍ಪಿ ಸಿದ್ದಲಿಂಗಪ್ಪ ಗೌಡ ಆರ್. ಪಾಟೀಲ್, […]

ಲಾಲ್‍ಬಾಗ್‍ನಲ್ಲಿ ವೈಭವದ ಫಲಪುಷ್ಪ ಪ್ರದರ್ಶನ ಆರಂಭ

ಬೆಂಗಳೂರು,ಜ.20- ನಗರದ ಜನತೆಯ ಪ್ರಮುಖ ಆಕರ್ಷಣೆಗಳಲ್ಲೊಂದಾದ ಬಹುನಿರೀಕ್ಷಿತ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‍ಬಾಗ್‍ನ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ 10 ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ನೀಡಿದರು. ಗಣರಾಜ್ಯೋತ್ಸವದ ಅಂಗವಾಗಿ ಪ್ರತಿ ವರ್ಷ ತೋಟಗಾರಿಕೆ ಇಲಾಖೆ ಸಹಭಾಗಿತ್ವದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಮೊದಲ ದಿನದ ಉದ್ಘಾಟನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ, ತೋಟಗಾರಿಕೆ ಸಚಿವ ಮುನಿರತ್ನ ಮತ್ತಿತರ ಅಧಿಕಾರಿಗಳು ಸಂಪ್ರದಾಯದಂತೆ ಚಾಲನೆ ನೀಡಿ ಶುಭ ಕೋರಿದರು. ಇಂದಿನಿಂದ ಒಟ್ಟು 10 […]