ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕಂಗೊಳಿಸಿದ ಕರ್ನಾಟಕ ಕರಕುಶಲ ಕಲೆಗಳ ಸ್ತಬ್ಧಚಿತ್ರ
ನವದೆಹಲಿ, ಜ.26- ಕೌಶಲ್ಯದಿಂದ ತಯಾರಿಸಿದ ಮಡಿಕೆಗಳು, ಸೂಕ್ಷ್ಮವಾಗಿ ಕೆತ್ತಲಾದ ಗಂಧದ ಮಿನಿಯೇಚರ್‍ಗಳು, ಕೈಮಗ್ಗದ ಸೀರೆಗಳು ಮುಂತಾದ ಕರ್ನಾಟಕದ ಶ್ರೀಮಂತ ಕರಕುಶಲ ಕಲೆಗಳು ಇಲ್ಲಿ ಇಂದು ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರದಲ್ಲಿ ಗಮನ ಸೆಳೇದ ಅಂಶಗಳಾಗಿದ್ದವು. ಮೈಸೂರು ರೋಸ್‍ವುಡ್‍ನಲ್ಲಿ ಕೆತ್ತಿದ ಮತ್ತು ದಂತದ ಒಳಕೆತ್ತನೆಗಳಿಂದ ಕೂಡಿದ ಬೃಹತ್ ಏಷ್ಯಾಟಿಕ್ ಆನೆ, ಕಣ್ಸೆಳೆಯುವ ಬಿರ್ರಿವೇರ್, ಕಂಚಿನ ಪ್ರತಿಮೆಗಳು ಮತ್ತು ಚನ್ನಪಟ್ಟಣದ ಮರದ ಆಟಿಕೆಗಳು ಈ ಸ್ತಬ್ಧಚಿತ್ರದ ಪ್ರಮುಖ ಅಂಶಗಳಾಗಿದ್ದವು. Our Karnataka’s Tableau at the #RepublicDayParade […]