ಮತ್ತಷ್ಟು ರೊಚ್ಚಿಗೆದ್ದ ರಷ್ಯಾ, ಉಕ್ರೇನ್‍ನ ತೈಲ  ಸಂಗ್ರಹಗಾರಗಳು ಉಡೀಸ್..!

ಕೀವ್,ಫೆ.27-ರಷ್ಯಾ ಆಕ್ರಮಣದಿಂದ ಜರ್ಝರಿತವಾಗಿದ್ದ ಉಕ್ರೇನ್ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲದಿಂದಾಗಿ ನಿಧಾನಕ್ಕೆ ಚೇತರಿಸಿಕೊಳ್ಳಲಾರಂಭಿಸಿದೆ. ವಿವಿಧ ರಾಷ್ಟ್ರಗಳು, ಸೈನಿಕರು ಸೇರಿದಂತೆ ಯುದ್ಧ ಶಸ್ತ್ರಾಸ್ತ್ರಗಳನ್ನು ರವಾನೆ ಮಾಡುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುತ್ತಿದೆ. ಇದರಿಂದ ರಷ್ಯಾ ಮತ್ತಷ್ಟು ರೊಚ್ಚುಗೆದಿದ್ದು, ಉಕ್ರೇನ್‍ನ ತೈಲ ಸಂಗ್ರಹಗಾರಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳ ಮೇಲೆ ದಾಳಿ ನಡೆಸಿದೆ. ಕಳೆದ ಗುರುವಾರದಿಂದ ಆರಂಭಗೊಂಡಿರುವ ಸಂಘರ್ಷ, ದಿನೇ ದಿನೇ ಹೆಚ್ಚಾಗುತ್ತಿದೆ. ನಿನ್ನೆಯವರೆಗೂ ಉಕ್ರೇನ್ ಒಂಟಿ ಎಂಬ ಅನಾಥ ಪ್ರಜ್ಞೆಯಿಂದ ಬಳಲುತ್ತಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಸೇರಿದಂತೆ ಮೂರು ದೇಶಗಳು ತಟಸ್ಥ […]