ಜೆಡಿಎಸ್ ಗೆ ನಾನು ಇನ್ನೂ ರಾಜೀನಾಮೆ ಕೊಟ್ಟಿಲ್ಲ : ಶಿವಲಿಂಗೇಗೌಡ

ಬೆಂಗಳೂರು,ಫೆ.13- ಅರಸೀಕೆರೆ ಕ್ಷೇತ್ರದಲ್ಲಿ ಯಾವುದೇ ಒತ್ತಡ, ಗೊಂದಲ ಇಲ್ಲ.ನಾನು ಇನ್ನು ಜೆಡಿಎಸ್ನಲ್ಲೇ ಇದ್ದೇನೆ. ರಾಜೀನಾಮೆ ಕೊಟ್ಟಿಲ್ಲ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿಧಾನಸಭೆಗೆ ತಿಳಿಸಿದರು. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣ ಪ್ರಸ್ತಾವದ ಬಗ್ಗೆ ಆಡಳಿತ ಪಕ್ಷದ ಶಾಸಕ ಸಿ.ಟಿ.ರವಿ ಮಾತನಾಡುತ್ತಿದ್ದಾಗ ಶಿವಲಿಂಗೇಗೌಡರು ಪಕ್ಷದ ಪ್ರಣಾಳಿಕೆ ಹೇಳುವುದಿಲ್ಲ. ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿ ಎಂದು ಆಕ್ಷೇಪಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಅಶೋಕ್, ನೀವು ಪಕ್ಷದ ಸಮಯದಲ್ಲಿ ಮಾತನಾಡುತ್ತೀರಿ, ಬಿಜೆಪಿಯೋ, ಕಾಂಗ್ರೆಸೋ ಅಥವಾ ಜೆಡಿಎಸ್ ಪಕ್ಷದ ಸಮಯದಲ್ಲಿ ಮಾತನಾಡುತ್ತೀರೋ […]