ಜೋ ಬಿಡೆನ್ 2ನೇ ಅವಧಿಗೆ ಸ್ವಪಕ್ಷೀಯರಿಂದಲೇ ವಿರೋಧ

ಲ್ಯಾಕೋನಿಯಾ,ಮಾ.6- ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಎರಡನೇ ಅವಧಿಗೆ ಅಧ್ಯಕ್ಷರಾಗುವುದನ್ನು ಅವರೇ ಪಕ್ಷದ ಸಂಸದರು ವಿರೋಧಿಸಲಾರಂಭಿಸಿದ್ದಾರೆ. ಜೋ ಬಿಡೆನ್‍ಗೆ 80 ವರ್ಷವಾಗಿರುವುದು ಒಂದು ಕಾರಣವಾದರೆ, ಆಫ್ಘಾನಿಸ್ಥಾನದಿಂದ ಸೇನೆಯನ್ನು ಹಿಂಪಡೆದ ಅವರ ನಿರ್ಧಾರ ಅಮೆರಿಕನ್ನರಲ್ಲಿ ಅಸಮಧಾನ ಮಡುಗಟ್ಟುವಂತೆ ಮಾಡಿದೆ. ಹೀಗಾಗಿ ಬಿಡೆನ್ ಎರಡನೇ ಅವಧಿಗೆ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧೆ ಮಾಡದಿರುವುದು ಒಳ್ಳೆಯದು ಎಂದು ಅವರದೇ ಪಕ್ಷದ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2019ರ ಚುನಾವಣೆಯಲ್ಲಿ ನ್ಯೂ ಹಾಂಪ್‍ಶೈರ್ ಪ್ರಾಂತ್ಯದಿಂದ ದಾಖಲಾರ್ಹ ಮತಗಳ ಮೂಲಕ ಬಿಡೆನ್ ಚುನಾಯಿತರಾಗಿದ್ದರು. ಈಗ ತವರು ನೆಲದಲ್ಲೂ […]