ಮಹಿಳೆಯರನ್ನು ಗೌರವಿಸಿ ಬೆಂಬಲಿಸಬೇಕು : ಮೋದಿ

ನವದೆಹಲಿ,ಆ.15- ದೇಶದ ಮಹಿಳಾ ಶಕ್ತಿಯನ್ನು ಗೌರವಿಸುವುದರ ಜೊತೆಗೆ, ಸಾಧನೆಗಳಿಗೆ ಬೆನ್ನೆಲುಬಾಗಿರಬೇಕಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಕರೆ ನೀಡಿದರು. 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ನಾರಿ ಶಕ್ತಿ ಇಂದು ದೇಶದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಮಹಿಳೆಯರನ್ನು ನಿಂದಿಸುವ , ಅಗೌರವಿಸುವ ಮನಸ್ಥಿತಿಯನ್ನು ತೊಡೆದು ಹಾಕಬೇಕು, ಲಿಂಗಾಧಾರಿತ ಅಸಮಾನತೆ ನಿವಾರಣೆಯಾಗಬೇಕು. ಮಹಿಳೆಯರು ಇಂದು ವಿಜ್ಞಾನ, ತಂತ್ರಜ್ಞಾನ, ಪೊಲೀಸ್, ಸೇನೆ, ಬಾಹ್ಯಾಕಾಶ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಅವರಿಗೆ ನಾವು ಬೆನ್ನೆಲುಬಾಗಿ […]