ಮದ್ದೂರಿನ ಶಿಂಷಾ ಸೇರಿ 7 ಸಹಕಾರ ಬ್ಯಾಂಕ್‍ಗಳಿಗೆ ಆರ್‌ಬಿಐ ನಿರ್ಬಂಧ

ನವದೆಹಲಿ,ಫೆ.25- ಆರ್ಥಿಕವಾಗಿ ಜನರ ಜೀವನಾಡಿಯಾಗಿದ್ದ ಸಹಕಾರ ಬ್ಯಾಂಕ್‍ಗಳಲ್ಲಿ ದಿನೇ ದಿನೇ ಅವ್ಯವಹಾರಗಳು, ಅಕ್ರಮಗಳು, ಅಶಿಸ್ತು ಹೆಚ್ಚುತ್ತಿದ್ದು, ಕೇಂದ್ರ ಬ್ಯಾಂಕ್ ಆರ್‌ಬಿಐ ಒಂದೇ ದಿನ ಮಂಡ್ಯ ಜಿಲ್ಲೆಯ ಮದ್ದೂರಿನ ಸಂಸ್ಥೆಯೂ ಸೇರಿದಂತೆ ದೇಶಾದ್ಯಂತ ಏಳು ಸಹಕಾರ ಬ್ಯಾಂಕ್‍ಗಳ ವ್ಯವಹಾರಗಳನ್ನು ಸ್ಥಗಿತಗೊಳಿಸಲು ಆದೇಶ ನೀಡಿದೆ. ಬ್ಯಾಂಕಿಂಗ್ ರೆಗ್ಯೂಲೇಷನ್ ಆಕ್ಟ್ 1949 ಸೆಕ್ಷನ್ 35 ಎ ಮತ್ತು ಓದಲಾದ 56 ಕಲಂ ಅಡಿ ಸದರಿ ಬ್ಯಾಂಕ್‍ಗಳಿಗೆ ಆರು ತಿಂಗಳ ಕಾಲ ಯಾವುದೇ ವಹಿವಾಟು ನಡೆಸಬಾರದು ಎಂಬ ನಿರ್ಬಂಧ ವಿಧಿಸಲಾಗಿದೆ. ಆರ್‍ಬಿಐನ ಪ್ರಧಾನ […]

ಚೀನಾ ಪ್ರಯಾಣಿರ ನಿರ್ಭಂಧಕ್ಕೆ ಅಪಸ್ವರ

ಬ್ರಸೆಲ್ಸï, ಜ. 5-ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳಿಗೆ ಬರುವ ಚೀನ ಪ್ರಜೆಗಳು ಕೊವಿಡ್- ನೆಗೆಟಿವ್‍ ಪ್ರಮಾಣ ಪತ್ರ ಕಡ್ಡಾಯ ಎಂದು ಕಠಿಣ ನಿರ್ಭಂಧ ಹೇರಲು ಚಿಂತನೆ ಮುಂದುವರೆಸಿದೆ. ಕಳೆದ ಒಂದು ವಾರದಿಂದ ಐರೋಪ್ಯ ಒಕ್ಕೂಟದ ಆರೋಗ್ಯ ತಜ್ಞರ ನಡುವಿನ ಮಾತುಕತೆಯ ನಂತರ, ಇಟಲಿ, ಫ್ರಾನ್ಸ್ ಮತ್ತು ಸ್ಪೇನ್‍ನಂತಹ ದೇಶಗಳು ಈಗಾಗಲೇ ಜಾರಿಗೆ ತಂದ ಪ್ರಯಾಣದ ನಿರ್ಬಂಧವನ್ನು ಎಲ್ಲಾ 27 ಸದಸ್ಯ ರಾಷ್ಟ್ರಗಳು ಪಾಲಿಸಲು ಮುಂದಾಗಿದೆ. ಚೀನಾ ಈ ಕ್ರಮಗಳನ್ನು ತೀವ್ರವಾಗಿ ತಿರಸ್ಕರಿಸಿದೆ ಮತ್ತು ಪ್ರತಿಕ್ರಮದ ಎಚ್ಚರಿಕೆ ನೀಡಿದೆ. […]

ಮಹಿಳೆಯರ ಶಿಕ್ಷಣಕ್ಕೆ ತಾಲಿಬಾನ್ ನಿರ್ಬಂಧ, ಅಮೆರಿಕ ಖಂಡನೆ

ವಾಷಿಂಗ್ಟನ್, ಡಿ .21-ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಶಿಕ್ಷಣಕ್ಕೆ ನಿರ್ಬಂಧ ಹೇರಿರುವ ತಾಲಿಬಾನ್ ಆಡಳಿತದ ನಿರ್ಧಾರವನ್ನು ಅಮೆರಿಕ ಖಂಡಿಸಿದೆ. ಅಫ್ಘಾನ್ ಮಹಿಳೆಯರು ವಿಶ್ವವಿದ್ಯಾನಿಲಯ ಮಟ್ಟದ ಶಿಕ್ಷಣವನ್ನು ಪಡೆಯುವುದನ್ನು ತಡೆಯುವ ತಾಲಿಬಾನ್‍ನ ಅಸಮರ್ಥನೀಯ ನಿರ್ಧಾರವನ್ನು ಅಮೆರಿಕ ಖಂಡಿಸುತ್ತದೆ ಎಂದು ಶ್ವೇತಭವನದ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ಹೇಳಿದ್ದಾರೆ. ಇದು ಶೋಚನೀಯ ನಿರ್ಧಾರ,ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ಹೇರಿರುವುದು ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ದಮನ ಮಾಡಿದಂತೆ ಎಂದಿದ್ದಾರೆ. ಅಫ್ಘಾನಿಸ್ತಾನದ ಅರ್ಧದಷ್ಟು ಜನಸಂಖ್ಯೆಯನ್ನು ತಡೆಹಿಡಿಯುವ ಈ ನಿರ್ಧಾರ ಅರ್ಹವಲ್ಲ […]

ಸದ್ಯಕ್ಕೆ ಟ್ವಿಟರ್‌ನಲ್ಲಿ ನಿರ್ಬಂಧಗಳ ಸಡಿಲಿಕೆ ಇಲ್ಲ

ನವದೆಹಲಿ, ಅ.29- ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆ ಟ್ವಿಟರ್ ಉದ್ಯಮಿ ಎಲೋನ್ ಮಸ್ಕ್ ಅವರ ಒಡೆತನಕ್ಕೆ ಜಾರಿದ ಬೆನ್ನಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶಗಳು ಸಿಗುವ ವಿಶ್ವಾಸ ವ್ಯಕ್ತವಾಗಿದ್ದು, ಇನ್ನೂ ಮುಂದಾದರೂ ಸರ್ಕಾರದ ಒತ್ತಡಕ್ಕೆ ಮಣಿದ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ತಗ್ಗಲಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಆಶಯ ವ್ಯಕ್ತ ಪಡಿಸಿದ್ದಾರೆ. ಅಮರಿಕಾದ ಮಾಜಿ ಅಧ್ಯಕ್ಷರ ಖಾತೆಯ ಕುರಿತು ಗೊಂದಲಗಳು ಮುಂದುವರೆದಿವೆ. ಎಲೋನ್ ಮಸ್ಕ್ ಟ್ವಿಟರ್ ಖರೀದಿಯ ವ್ಯವಹಾರ ಕುದುರಿಸಲಾರಂಭಿಸಿದ ಕ್ಷಣದಿಂದಲೂ ಅಭಿವ್ಯಕ್ತಿ ಸ್ವಾತಂತ್ರ್ಯದ […]