ಚುನಾವಣಾ ಅಖಾಡಕ್ಕಿಳಿಯಲು ಸಜ್ಜಾದ ನಿವೃತ್ತ ಅಧಿಕಾರಿಗಳು

ಬೆಂಗಳೂರು,ಮಾ.24- ನಿವೃತ್ತಿ ಅಥವಾ ಸ್ವಯಂ ನಿವೃತ್ತಿಯ ನಂತರ ಚುನಾವಣಾ ಅಖಾಡಕ್ಕೆ ಧುಮುಕುತ್ತಿರುವ ಅಧಿಕಾರಿಗಳ ಸಂಖ್ಯೆಗೇನು ಈ ಬಾರಿ ಕಡಿಮೆ ಇಲ್ಲ. ಅನೇಕ ಹಿರಿಯ ಅಧಿಕಾರಿಗಳು ಈ ಸಲ ಚುನಾವಣಾ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಹಿಂದೆ ಮಾಜಿ ಐಪಿಎಸ್ ಅಧಿಕಾರಿ ಗಳಾದ ಹೆಚ್.ಟಿ.ಸಾಂಗ್ಲಿಯಾನ ಮತ್ತು ಕೋದಂಡರಾಮಯ್ಯ ಚುನಾವಣಾ ರಣ ಕಣದಲ್ಲಿ ಜಯಭೇರಿ ಬಾರಿಸಿದ್ದರು. ಬೆಸ್ಕಾಂನಲ್ಲಿ ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಹೆಚ್.ನಾಗೇಶ್ ಮುಳಬಾಗಲಿನಿಂದ ಸ್ರ್ಪಧಿಸಿ ಗೆದ್ದಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಐ.ಆರ್. ಪೆರುಮಾಳ್ (ಶಿವಾಜಿನಗರ […]

ಕಿರಣ್ ರಿಜಿಜು ಹೇಳಿಕೆಗೆ ಬಾರ್ ಕೌನ್ಸಿಲ್ ಆಕ್ರೋಶ

ಅಗರ್ತಲಾ,ಮಾ.24-ನಿವೃತ್ತ ನ್ಯಾಯಾೀಧಿಶರ ವಿರುದ್ಧ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಮಾಡಿರುವ ಟೀಕೆಗಳನ್ನು ತ್ರಿಪುರ ಬಾರ್ ಕೌನ್ಸಿಲ್ ಖಂಡಿಸಿದೆ. ಕಾನೂನು ಸಚಿವರ ಈ ಹೇಳಿಕೆಗಳು ನ್ಯಾಯಾಂಗದಲ್ಲಿ ಮಧ್ಯಪ್ರವೇಶಿಸುವ ಕೇಂದ್ರದ ಪ್ರಯತ್ನವಾಗಿದೆ ಎಂದು ಬಾರ್ ಕೌನ್ಸಿಲ್ ಆರೋಪಿಸಿದೆ. ಮಾರ್ಚ್ 18 ರಂದು ನಡೆದ ಸಮಾವೇಶವೊಂದರಲ್ಲಿ, ಕೆಲವು ನಿವೃತ್ತ ನ್ಯಾಯಾೀಧಿಶರು ಮತ್ತು ಭಾರತ ವಿರೋಧಿಗ್ಯಾಂಗ್‍ನ ಭಾಗವಾಗಿದ್ದಾರೆ. ಕೆಲವು ಕಾರ್ಯಕರ್ತರು ಭಾರತೀಯ ನ್ಯಾಯಾಂಗವನ್ನು ವಿರೋಧ ಪಕ್ಷದ ಪಾತ್ರವನ್ನು ವಹಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ರಿಜಿಜು ಹೇಳಿದ್ದರು. ಛತ್ತೀಸ್‍ಗಢದಲ್ಲಿ ನಾಲ್ವರು ಅಮೃತ್‍ಸಿಂಗ್‍ಪಾಲ್ […]

ಒಂಟಿಯಾಗಿ ವಾಸವಾಗಿದ್ದ ನಿವೃತ್ತ ಶಿಕ್ಷಕಿ ಕೊಲೆ ಮಾಡಿದ್ದ ಇಬ್ಬರ ಸೆರೆ

ಬೆಂಗಳೂರು,ಸೆ.17-ಆಭರಣಗಳನ್ನು ದೋಚುವ ಸಲುವಾಗಿ ಒಂಟಿಯಾಗಿ ವಾಸವಾಗಿದ್ದ ನಿವೃತ್ತ ಶಿಕ್ಷಕಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಎದುರು ಮನೆ ನಿವಾಸಿ ಸೇರಿದಂತೆ ಇಬ್ಬರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ 68ಗ್ರಾಂ ಚಿನ್ನಾಭರಣ, ಬೈಕ್ ಹಾಗೂ ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾರಣ್ಯಪುರದ ನಾಗೇಂದ್ರ (31) ಮತ್ತು ಆಂಧ್ರಪ್ರದೇಶದ ರಾಮರಾಜು ಅಲಿಯಾಸ್ ವಿಜಯ್ (28) ಬಂಧಿತರು.ಅಂಬಾಭವಾನಿ ಲೇಔಟ್, 1ನೇ ಹಂತದ ಮನೆಯೊಂದರ 2ನೇ ಮಹಡಿಯಲ್ಲಿ ನಿವೃತ್ತ ಶಿಕ್ಷಕಿ ಪ್ರಸನ್ನಕುಮಾರಿ (68) ಅವರು ಒಂಟಿಯಾಗಿ ವಾಸಿಸುತ್ತಿದ್ದರು. ಇವರು ಮೂಲತಃ ಆಂಧ್ರಪ್ರದೇಶದ ವಿಜಯವಾಡದವರು. ಸೆ.8ರಂದು ಮಧ್ಯಾಹ್ನ […]

ಧ್ವಜಾರೋಹಣದ ವೇಳೆ ಕುಸಿದು ಬಿದ್ದು ನಿವೃತ್ತ ಯೋಧ ಸಾವು

ಕಡಬ,ಆ.15- ಧ್ವಜಾರೋಹಣ ಸಂದರ್ಭದಲ್ಲಿ ನಿವೃತ್ತ ಯೋಧ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕಿನ ಕುಟ್ರುಪಾಡಿ ಗ್ರಾಮದ ಹಳೇ ಸ್ಟೇಷನ್ ಅಮೃತಸರೋವರದ ಬಳಿ ಇಂದು ಬೆಳಗ್ಗೆ 75ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಸಂದರ್ಭದಲ್ಲಿ ಏಕಾಏಕಿ ನಿವೃತ್ತಯೋಧ ಗಂಗಾಧರ ಗೌಡ ಎಂಬುವರು ಕುಸಿದು ಬಿದ್ದರು. ಸ್ಥಳದಲ್ಲಿದ್ದವರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ನಿವೃತ್ತ ಯೋಧ ಗಂಗಾಧರ ಗೌಡ ಅವರ ನಿಧನದಿಂದ ಕುಟ್ರುಪಾಡಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.