ಮಹಾರಾಷ್ಟ್ರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನೀತಿ ಪರಿಷ್ಕರಣೆ

ಮುಂಬೈ,ಡಿ.3- ಪ್ಲಾಸ್ಟಿಕ್ ಜಾಗತಿಕ ವೈರಿಯಾಗಿದ್ದು ಹಲವು ದೇಶಗಳು ಇದರ ಮೇಲೆ ನಿಷೇಧ ಹೇರಿವೆ. ಭಾರತದಲ್ಲೂ ಬಹುತೇಕ ರಾಜ್ಯಗಳು ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿವೆ. ಸುಪ್ರೀಂಕೋರ್ಟ್ ಪದೇ ಪದೇ ಪ್ಲಾಸ್ಟಿಕ್ ಬಳಕೆ ನಿರ್ಬಂಧಗಳ ಕುರಿತು ಪ್ರಸ್ತಾಪಿಸುತ್ತಲೇ ಇದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ಕರಗಬಹುದಾದ ಪ್ಲಾಸ್ಟಿಕ್‍ನಿಂದ ಕೆಲ ವಸ್ತುಗಳ ತಯಾರಿಕೆಗೆ ಅನುಮತಿ ನೀಡಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ನಡೆದ ಸಮಿತಿ, ಏಕಬಳಕೆಯ ಪ್ಲಾಸ್ಟಿಕ್ ನೀತಿಯನ್ನು ಪರಿಷ್ಕರಣೆ ಮಾಡಿದೆ. ಮಹಾರಾಷ್ಟ್ರದ ಪರಿಸರ ಮತ್ತು ಹವಾಮಾನ ಬದಲಾವಣೆ […]