ಗುಜರಾತ್‍ನಲ್ಲಿ ಇಂದು ಮುಂಜಾನೆ 3.8 ತೀವ್ರತೆಯ ಭೂಕಂಪ

ಅಹಮದಾಬಾದ್,ಫೆ.11- ಗುಜರಾತ್‍ನ ಸೂರತ್ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ 3.8 ತೀವ್ರತೆಯ ಕಂಪನ ದಾಖಲಾಗಿದೆ ಎಂದು ಭೂಕಂಪಶಾಸ್ತ್ರ ಸಂಶೋಧನಾ ಸಂಸ್ಥೆ (ಐಎಸ್‍ಆರ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೂರತ್‍ನ ಪಶ್ಚಿಮ ನೈಋತ್ಯ (ಡಬ್ಲ್ಯುಎಸ್‍ಡಬ್ಲ್ಯು) 27 ಕಿಲೋಮೀಟರ್‍ಗಳಷ್ಟು ಅದರ ಕೇಂದ್ರಬಿಂದು 12:52 ಕ್ಕೆ ದಾಖಲಾಗಿದೆ. ಜಿಲ್ಲೆಯ ಹಾಜಿರಾದಿಂದ ಅರಬ್ಬಿ ಸಮುದ್ರದಲ್ಲಿನ ಭೂಕಂಪನದ ಕೇಂದ್ರಬಿಂದು 5.2 ಕಿಲೋಮೀಟರ್ ಆಳದಲ್ಲಿದೆ ಎಂದು ತಿಳಿಸಿದ್ದಾರೆ. ದೇಶದಲ್ಲಿದ್ದಾರೆ 10ಸಾವಿರಕ್ಕೂ ಹೆಚ್ಚು ಬೀದಿಮಕ್ಕಳು ಕಂಪನದಿಂದ ಯಾವುದೇ ಆಸ್ತಿ ಅಥವಾ ಜೀವ ಹಾನಿಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. […]