ಮತ್ತೆ ಭಾರತಕ್ಕೆ ಆಗಮಿಸಲು ಕಾತುರದಿಂದ ಕಾಯುತ್ತಿದ್ದೇನೆ : ಬಿಲ್ ಗೇಟ್ಸ್

ನ್ಯೂಯಾರ್ಕ್,ಮಾ.8-ವಿಶ್ವದ ಮಾಹಿತಿ ತಂತ್ರ ತಂತ್ರಜ್ಞಾನ ದಿಗ್ಗಜ ಕಲಿಯುಗ ಕುಬೇರ ಮೈಕ್ರೋಸಾಫ್ಟ್ ಒಡೆಯ ಬಿಲ್ ಗೇಟ್ಸ್ ಭಾರತವನ್ನು ಕೊಂಡಾಡಿದ್ದಾರೆ. ಇತ್ತೀಚೆಗಷ್ಟೇ ಭಾರತದ ಪ್ರವಾಸದ ಮುಗಿಸಿ ತೆರಳಿರುವ ಅವರು ಅಲ್ಲಿನ ಅನುಭವದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಮತ್ತೆ ಭಾರತಕ್ಕೆ ಆಗಮಿಸಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಟ್ವಿಟ್ಟರ್‍ನಲ್ಲಿ ಹೇಳಿಕೊಂಡಿದ್ದಾರೆ. ಕಳೆದ ಕೆಲ ದಿನಗಳಲ್ಲಿ ಭಾರತದಲ್ಲಿ ಸುಂದರವಾದ ದಿನಗಳನ್ನು ಕಳೆದಿದ್ದೇನೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ಗಣ್ಯರ ಭೇಟಿ ಹಾಗೂ ಬೆಂಗಳೂರು ನಗರಕ್ಕೆ ಭೇಟಿ ನೀಡಿರುವ ವಿಚಾರವನ್ನೂ ಖುಷಿಯಿಂದ ಬಿಲ್ ಗೇಟ್ಸ್ […]