ಗುಂಡಿಗಂಡಾಂತರ : ಕುಸಿದು ಬೀಳುತ್ತಲೇ ಇವೆ ಬೆಂಗಳೂರಿನ ರಸ್ತೆಗಳು

ಬೆಂಗಳೂರು,ಜ.21- ನಗರದಲ್ಲಿ ರಸ್ತೆ ಕುಸಿದು ಬೀಳುವ ಪ್ರಕರಣಗಳು ಮುಂದುವರೆಯುತ್ತಲೇ ಇವೆ. ಬ್ರಿಗೇಡ್ ರೋಡ್, ಮಹಾಲಕ್ಷ್ಮಿ ಲೇಔಟ್‍ಗಳಲ್ಲಿ ರಸ್ತೆ ಗುಂಡಿ ಕುಸಿದುಬಿದ್ದ ರೀತಿಯಲ್ಲೇ ನಗರದ ರಸ್ತೆಯಲ್ಲಿ ಗುಂಡಿ ಗಂಡಾಂತರ ಕಾಣಿಸಿಕೊಂಡಿದೆ. ಇಟ್ಟುಮಡು ಮುಖ್ಯ ರಸ್ತೆಯಲ್ಲಿ ಮಾರುತಿ ನಗರದ ರಸ್ತೆ ಕುಸಿದು ಐದು ಅಡಿಗೂ ಹೆಚ್ಚು ಕಂದಕ ಬಿದ್ದಿರುವುದು ಕಂಡು ಬಂದಿದೆ. ಕಳೆದ ಒಂದು ತಿಂಗಳಿನಿಂದ ಸ್ವಲ್ಪ ಸ್ವಲ್ಪ ರಸ್ತೆ ಕುಸಿಯುತ್ತಿದ್ದರೂ ಸಂಬಂಧಪಟ್ಟವರು ಯಾವುದೆ ಕ್ರಮ ಕೈಗೊಳ್ಳದ ಕಾರಣ ರಸ್ತೆ ಇದೀಗ ಸಂಪೂರ್ಣ ಕುಸಿದಿದೆ. ರಸ್ತೆ ಕುಸಿದಿದ್ದರೂ ಸ್ಥಳಕ್ಕೆ ಇದುವರೆಗೂ […]

ಬಿಬಿಎಂಪಿಗೆ ಅಂಟಿದ ‘ಭ್ರಷ್ಟ’ರೋಗದಿಂದ ‘ಗುಂಡಿ ಸಿಟಿ’ಯಾದ ಬೆಂಗಳೂರು

ಬೆಂಗಳೂರು,ಜ.17- ನಗರದ ರಸ್ತೆಗಳು ಎಲ್ಲೇಂದರಲ್ಲಿ ಕುಸಿದು ಬೀಳುವುದು ಮಾಮೂಲಾಗಿ ಹೋಗಿದೆ. ಬಿಬಿಎಂಪಿಯ ಕಳಪೆ ಕಾಮಗಾರಿಗಳಿಂದಾಗಿ ನಗರದ ಪ್ರಮುಖ ಪ್ರದೇಶಗಳ ರಸ್ತೆಗಳೇ ಕುಸಿದು ಬೀಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಹಾಲಕ್ಷ್ಮೀ ಬಡಾವಣೆಯ ಮುಖ್ಯ ರಸ್ತೆಯ ಸಪ್ತಗಿರಿ ಕಲ್ಯಾಣ ಮಂಟಪದ ಬಳಿಯ ರಸ್ತೆ ಏಕಾಏಕಿ ಕುಸಿದುಬಿದ್ದಿದೆ. ಈ ಹಿಂದೆ ಈ ಮಾರ್ಗದಲ್ಲಿ ಜಲಮಂಡಳಿಯವರು ಪೈಪ್‍ಲೈನ್ ಅಳವಡಿಕೆಗೆ ರಸ್ತೆ ಅಗೆದು ನಂತರ ಅದನ್ನು ಸೂಕ್ತವಾಗಿ ಭರ್ತಿ ಮಾಡದ ಹಿನ್ನಲೆಯಲ್ಲಿ ಇಂತಹ ಘಟನೆ ನಡೆದಿದೆ ಎನ್ನಲಾಗಿದೆ. ಇಂದು ಬೆಳಗ್ಗೆ ಏಕಾಏಕಿ ರಸ್ತೆ ಕುಸಿದುಬಿದ್ದರೂ ಬಿಬಿಎಂಪಿಯವರಾಗಲಿ […]

ಅಂಬ್ಯುಲೆನ್ಸ್ ಗಳ ಸುಗಮ ಸಂಚಾರಕ್ಕೆ ಹೊಸ ವ್ಯವಸ್ಥೆ

ಬೆಂಗಳೂರು,ಜ.16- ಸದಾ ವಾಹನ ದಟ್ಟಣೆಯಿಂದ ಗಿಜಿಗುಡುವ ರಾಜಧಾನಿಯಲ್ಲಿ ರೋಗಿಗಳ ಜೀವ ಉಳಿಸೋ ಅಂಬ್ಯುಲೆನ್ಸ್‍ಗಳು ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತೆರಳಲು ಸಾಧ್ಯವಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿ ನಗರದ ರಸ್ತೆಗಳಲ್ಲಿ ಅಂಬ್ಯುಲೆನ್ಸ್ ಗಳು ಸರಾಗವಾಗಿ ಸಂಚರಿಸಲು ಅನುಕೂಲವಾಗುವಂತಹ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಸಿಕ್ಕಿ ಹಾಕಿಕೊಳ್ಳುವ ಅಂಬ್ಯುಲೆನ್ಸ್‍ಗಳಿಗೆ ಸರಾಗ ಸಂಚಾರ ವ್ಯವಸ್ಥೆ ಕಲ್ಪಿಸಲು ಪೊಲೀಸರು ಪರದಾಡಬೇಕಾಗಿತ್ತು. ಹೀಗಾಗಿ ತುರ್ತು ವಾಹನಗಳಿಗೆ ಟ್ರಾಫಿಕ್ ತಪ್ಪಿಸಲು ವಿಶೇಷ ವ್ಯವಸ್ಥೆ ಮಾಡಲು ಸಂಚಾರಿ ಪೊಲೀಸರು ತೀರ್ಮಾನಿಸಿದ್ದಾರೆ. ಅಂಬ್ಯುಲೆನ್ಸ್‍ಗಳ ಸರಾಗ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ […]

ಸಿಲಿಕಾನ್ ಸಿಟಿಯಲ್ಲಿ ಮುಗಿಯದ ಕಾಮಗಾರಿ, ಪಾದಚಾರಿಗಳಿಗೆ ಕಿರಿಕಿರಿ

ಸಿಲಿಕಾನ್ ಸಿಟಿಯಲ್ಲಿ ವರ್ಷ ಪೂರ್ತಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಆದರೆ, ಸಮಸ್ಯೆಗಳು ಮಾತ್ರ ಹಾಗೆಯೇ ಇವೆ. ನಿನ್ನೆ ನೋಡಿದ ರಸ್ತೆಗಳು ಇಂದಿಗೆ ಗುಂಡಿಮಯವಾಗಿರುತ್ತವೆ. ಆ ಕಾಮಗಾರಿ, ಈ ಕಾಮಗಾರಿಗೆಂದು ರಸ್ತೆಗಳನ್ನು ಬಗೆದು ಗುಂಡಿ ಮಾಡಿಬಿಡುತ್ತಾರೆ. ಅದನ್ನು ಮುಚ್ಚಲು ತಿಂಗಳುಗಟ್ಟಲೆ ಬೇಕು. ನಗರದಲ್ಲಿ ಸಂಚರಿಸಬೇಕಾದರೆ ವಾಹನ ಸವಾರರು, ಪಾದಚಾರಿಗಳು ಮೈಯೆಲ್ಲಾ ಕಣ್ಣಾಗಿಟ್ಟುಕೊಂಡಿರಬೇಕು. ಎಲ್ಲಿ ಗುಂಡಿ ಇರುತ್ತವೋ, ಚರಂಡಿಗಳು ಬಾಯಿತೆರೆದಿಟ್ಟು ಕೊಂಡಿರುತ್ತವೋ ತಿಳಿಯದು. ಒಂದು ವೇಳೆ ಎಚ್ಚರ ತಪ್ಪಿದರೆ ಜೀವಕ್ಕೆ ಆಪತ್ತು ಖಚಿತ. ಹೇಳುವುದಕ್ಕೆ ಮಾತ್ರ ಬೆಂಗಳೂರು ಸಿಲಿಕಾನ್ […]

ಕೇಳ್ರಪ್ಪ ಕೇಳಿ, ಹೊಸ ವರ್ಷಕ್ಕೂ ಮುನ್ನ ಬೆಂಗಳೂರು ರಸ್ತೆಗಳು ಗುಂಡಿ ಮುಕ್ತವಾಗಲಿವೆಯಂತೆ..!

ಬೆಂಗಳೂರು,ಡಿ.20-ಹೊಸ ವರ್ಷ ಆರಂಭಕ್ಕೂ ಮುನ್ನ ನಗರದ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭರವಸೆ ನೀಡಿದ್ದಾರೆ. ನಗರದಲ್ಲಿ ಈಗಾಗಲೇ ರಸ್ತೆ ಗುಂಡಿಗಳನ್ನು ಮುಚ್ಚಲಾಗಿತ್ತು. ಇತ್ತಿಚೆಗೆ ಬಿದ್ದ ಮಳೆಯಿಂದಾಗಿ ಇನ್ನು ಕೆಲವು ಕಡೆಗಳರಲ್ಲಿ ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದನ್ನು ಗಂಭೀರವಾಗಿ ಪರಿಗಣಿಸಿ ಡಿ.31ರೊಳಗೆ ಎಲ್ಲ ಗುಂಡಿಗಳನ್ನು ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ನಗರದ ಪ್ರಮುಖ ರಸ್ತೆಗಳನ್ನು ಡಿ.31ರೊಳಗೆ ಮುಚ್ಚಲೆ ಬೇಕು. 31 ರ ನಂತರ ಫೀಕ್ಸ್ ಮೈ ಸ್ಟ್ರೀಟ್ […]

ಅನುಮತಿ ಇಲ್ಲದೆ ರಸ್ತೆ ಅಗೆದ ಎಜೆನ್ಸಿಗಳಿಗೆ 25 ಲಕ್ಷರೂ. ದಂಡ

ಬೆಂಗಳೂರು,ನ.30- ಯಾವುದೇ ಅನುಮತಿ ಇಲ್ಲದೆ ಸಿಲಿಕಾನ್ ಸಿಟಿ ರಸ್ತೆಗಳನ್ನು ಅಗೆದ ಟೆಲಿಕಾಂ ಏಜೆನ್ಸಿಗಳಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿ 25 ಲಕ್ಷ ರೂ. ದಂಡ ವಿಧಿಸಿದೆ. ಮಹದೇವಪುರದ ವಿನಾಯಕನಗರದಲ್ಲಿ ಬಿಬಿಎಂಪಿ ಹೊಸದಾಗಿ ಹಾಕಲಾಗಿದ್ದ ರಸ್ತೆಯನ್ನು ಅಗೆದ ನಂತರ ಇಲ್ಲಿನ ನಿವಾಸಿಗಳು ಸಂಕಷ್ಟದ ಎದುರಿಸಿದ್ದರು. ಹೀಗೆ ನಗರದ ವಿವಿಧ ವಾರ್ಡ್‍ಗಳಲ್ಲೂ ರಸ್ತೆ ಅಗೆದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಸೆಪ್ಟೆಂಬರ್‍ನಲ್ಲಿ ಟೆಲಿಕಾಂ ಪೂರೈಕೆದಾರಾದ ಜಿಯೋ ಡಿಜಿಟಲ್ ಫೈಬರ್ ಪ್ರೈವೇಟ್ ಲಿಮಿಟೆಡ್, ಭಾರತಿ ಏರ್‍ಟೆಲ್ ಲಿಮಿಟೆಡ್, ಟೆಲಿಸಾನಿಕ್ ನೆಟ್ವಕ್ರ್ಸ್ ಲಿಮಿಟೆಡ್ ಮತ್ತು ವಿಎಸಿ […]

ಬೆಂಗಳೂರಿಗರೇ ನಾಳೆ ರಸ್ತೆಗಿಳಿಯುವ ಮುನ್ನ ಇಲ್ಲಿ ಗಮನಿಸಿ

ಬೆಂಗಳೂರ,ನ. 10- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕಡೆ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಭವನ ರಸ್ತೆ, ಪ್ಯಾಲೆಸ್ ರಸ್ತೆ, ರೇಸ್‍ಕೋರ್ಸ್, ಸ್ಯಾಂಕಿ ರೋಡ್, ಶೇಷಾದ್ರಿಪುರಂ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ವಾಹನ ಸವಾರರು ಈ ಮಾರ್ಗಗಳಲ್ಲಿ ಸಂಚರಿಸದೆ ಪರ್ಯಾಯ ರಸ್ತೆ ಬಳಸುವಂತೆ ಈಗಾಗಲೇ ಪ್ರಕಟಣೆಯಲ್ಲಿ ತಿಳಿಸಿದ್ದೇವೆ. ಅದರಂತೆ ಸಾರ್ವಜನಿಕರು […]

ಪ್ರಧಾನಿ ಬಂದ್ರೆ ಮಾತ್ರ ಬೆಂಗಳೂರಿನ ರಸ್ತೆಗಳಿಗೆ ಮುಕ್ತಿನಾ..?

ಬೆಂಗಳೂರು, ನ.7- ಉದ್ಯಾನನಗರಿಯ ರಸ್ತೆ ಗುಂಡಿಗಳಿಗೆ ಬಿದ್ದು ಜನಸಾಮಾನ್ಯರು ಕೈ-ಕಾಲು ಮುರಿದುಕೊಂಡು ಪ್ರಾಣ ಕಳೆದುಕೊಳ್ಳುತ್ತಿದ್ದರೂ ಮುಚ್ಚದೆ ನಿರ್ಲಕ್ಷ್ಯ ತೋರುವ ಬಿಬಿಎಂಪಿ… ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಂದರೆ ರಸ್ತೆಗಳಿಗೆ ಮುಕ್ತಿ ದೊರಕಿಸುತ್ತದೆ. ಕೆಂಪೇಗೌಡ ರೈಲ್ವೆ ನಿಲ್ದಾಣ ಮುಂಭಾಗದ ರಸ್ತೆ ತುಂಬ ಗುಂಡಿಗಳಿದ್ದು, ದುರಸ್ತಿಗಾಗಿ ಸಂಚಾರಿ ಪೊಲೀಸರು, ಸಾರ್ವಜನಿಕರು ಎಷ್ಟೇ ದೂರು ನೀಡಿದರೂ ಸಹ ಗುಂಡಿ ಮುಚ್ಚದ ಪಾಲಿಕೆ ಇದೀಗ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಹೊಸ ರಸ್ತೆಗಳನ್ನೇ ನಿರ್ಮಾಣ ಮಾಡುತ್ತಿದ್ದಾರೆ. ನ.11ರಂದು ಪ್ರಧಾನಿಯವರು ಸಿಟಿ ರೈಲ್ವೆ ನಿಲ್ದಾಣಕ್ಕೆ ಭೇಟಿ […]

ಮಹಾ ಮಳೆಗೆ ನಲುಗಿದ ಬೆಂಗಳೂರು, ಕೊಚ್ಚಿಹೋದ ವಾಹನಗಳು

ಬೆಂಗಳೂರು,ಅ.20- ನಿನ್ನೆ ಸುರಿದ ಮಹಾಮಳೆಗೆ ಐಟಿ ಬಿಟಿ ಸಿಟಿ ತತ್ತರಿಸಿ ಹೋಗಿದೆ. ಮಳೆರಾಯನ ಅಬ್ಬರಕ್ಕೆ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತಗೊಂಡಿದ್ದರೆ, ಅಂಡರ್‍ ಪಾಸ್‍ಗಳಲ್ಲಿ ಆಳುದ್ದ ನೀರು ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಶಿವಾಜಿನಗರ, ಮಂತ್ರಿಮಾಲ್ ಮುಂಭಾಗ, ಜಯನಗರದ ಸೌತ್ ಎಂಡ್ ಸರ್ಕಲ, ಓಕಳಿಪುರ ಸೇರಿದಂತೆ ನಗರದ ವಿವಿಧೆಡೆ ಇರುವ ಅಂಡರ್ ಪಾಸ್‍ಗಳಲ್ಲಿ ಆಳುದ್ದ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿತ್ತು. ಕನ್ನಡ ರಾಜ್ಯೋತ್ಸವದಂದು ಅಪ್ಪುಗೆ ಕರ್ನಾಟಕ ರತ್ನ ಪ್ರದಾನ ದೊಮ್ಮಲೂರು, ರಾಜಾಜಿನಗರ ಮತ್ತಿತರ […]

ಅತಿವೃಷ್ಟಿ-ಪ್ರವಾಹದಿಂದ ಹಾನಿಗೀಡಾದ ರಸ್ತೆ ದುರಸ್ತಿಗೆ 200 ಕೋಟಿ ರೂ. ಬಿಡುಗಡೆ

ಬೆಂಗಳೂರು,ಜು.19- ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೀಡಾದ ರಸ್ತೆ ದುರಸ್ತಿಗೆ ತುರ್ತಾಗಿ 200 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು. ಅತಿವೃಷ್ಟಿ ಹಾಗೂ ಪ್ರವಾಹದಿಂದ ರಸ್ತೆ ಹಾನಿಗೀಡಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯವನ್ನು ತಿಳಿಸಿದರು. ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ವಚ್ರ್ಯುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡು ಆಯಾ ಜಿಲ್ಲೆಗಳ ಸಮಸ್ಯೆಗಳನ್ನು ಹೇಳಿದ್ದಾರೆ. ಮಳೆ […]