ಸರಗಳ್ಳನ ಬಂಧನ, 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಜಪ್ತಿ

ಬೆಂಗಳೂರು, ಫೆ.7 – ದಾರಿಹೋಕರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಚಾಕು ತೋರಿಸಿ ಹೆದರಿಸಿ ಸರ ಅಪರಿಸುತ್ತಿದ್ದ ದರೋಡೆಕೋರನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿ 2 ಲಕ್ಷ ರೂ. ಬೆಲೆಬಾಳುವ ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ. ಬನಶಂಕರಿ ಎರಡನೇ ಹಂತ ಸರಬಂಡೆ ಪಾಳ್ಯ ನಿವಾಸಿ ಪದ್ಮನಾಭ ಅಲಿಯಾಸ್ ಗೂಳಿ ಗುಂಡ ಅಲಿಯಾಸ್ ಗೂಳಿ ರವಿ(28) ಬಂಧಿತ ಆರೋಪಿ. ಆರೋಪಿಯಿಂದ 2 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ […]
ನೆಲಮಂಗಲದಲ್ಲಿ ಘರ್ಜಿಸಿದ ಪೊಲೀಸ್ ಪಿಸ್ತೂಲ್ : ದರೋಡೆಕೋರನಿಗೆ ಗುಂಡೇಟು

ನೆಲಮಂಗಲ, ನ.23- ಸ್ಥಳ ಮೊಹಜರಿಗೆ ಕರೆದೊಯ್ದ ವೇಳೆ ಇಟ್ಟಿಯಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ದರೋಡೆಕೋರ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಯೋಗಾನಂದ ಅಲಿಯಾಸ್ ನೈಟ್‍ಶಿಫ್ಟ್ ಯೋಗಿ ಗುಂಡೇಟಿನಿಂದ ಗಾಯಗೊಂಡಿರುವ ದರೋಡೆಕೋರ. ಈತ ವಿರುದ್ಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಸರಗಳ್ಳತನ ಪ್ರಕರಣವಲ್ಲದೆ ಬೆಂಗಳೂರು ನಗರದ ಬ್ಯಾಟರಾಯನಪುರ, ಕುಮಾರಸ್ವಾಮಿ ಲೇಔಟ್ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪ್ರಕರಣಗಳು,ತುಮಕೂರಿನ ಕೋರಾ, ಅಮೃತೂರು ಠಾಣೆ, ನೆಲಮಂಗಲ ಗ್ರಾಮಾಂತರ, ಶ್ರೀರಂಗಪಟ್ಟಣ, ಹಿರಿಸಾವೆ ಪೊಲೀಸ್ ಠಾಣೆ ಸೇರಿದಂತೆ ಇತರೆ ಠಾಣೆಗಳಲ್ಲಿ ಸುಮಾರು 15ಕ್ಕೂ ಹೆಚ್ಚು […]
ಹಲ್ಲೆ ಮಾಡಿ ಪರಾರಿಯಾಗಿದ್ದ ದರೋಡೆಕೋರನ ಬಂಧನ

ಬೆಂಗಳೂರು, ನ.22- ಬಸ್ ಮತ್ತು ಲಾರಿಗಳ ಗಾಜು ಹೊಡೆದು ಚಾಲಕ ಮತ್ತು ಕ್ಲೀನರ್‍ಗಳಿಗೆ ಲಾಂಗ್‍ನಿಂದ ಹಲ್ಲೆ ಮಾಡಿ ಹಣ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ನಾಲ್ವರು ದರೋಡೆಕೋರರ ಪೈಕಿ ಒಬ್ಬಾತನನ್ನು ಕಾಮಾಕ್ಷಿ ಠಾಣೆ ಪೊಲೀಸರು ಬಂಧಿಸಿ, 2.35 ಲಕ್ಷ ರೂ. ಬೆಲೆಬಾಳುವ ಮೂರು ಮೊಬೈಲ್ ಹಾಗೂ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಚಂದ್ರಾಲೇಔಟ್ ನಿವಾಸಿ ವಿಕ್ರಂ ಅಲಿಯಾಸ್ ಸೈತಾನ್(21) ಬಂಧಿತ ಆರೋಪಿ. ಪ್ರಮುಖ ಆರೋಪಿ ವಿನಾಯಕ ಅಲಿಯಾಸ್ ಆರ್‍ಬೆಟ್ಟು ತಲೆಮರೆಸಿಕೊಂಡಿದ್ದಾನೆ. ನ.10ರಂದು ಬೆಳಗಿನ ಜಾವ 3.45ರ ಸುಮಾರಿನಲ್ಲಿ ಚೇತನ್ […]
ಹಲ್ಲೆ ನಡೆಸಿ ಪರಾರಿಯಾಗಿದ್ದ ದರೋಡೆಕೋರನ ಸೆರೆ

ಬೆಂಗಳೂರು, ನ.13- ಕಿತ್ತುಕೊಂಡು ಹೋಗಿದ್ದ ಮೊಬೈಲ್‍ನ್ನು ವಾಪಸ್ ನೀಡುವಂತೆ ಕೇಳಲು ಬಂದ ಡಿಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಸಂಪಂಗಿರಾಮನಗರದ ನಿವಾಸಿ ಟೋನಿ (23) ಬಂಧಿತ ಆರೋಪಿ. ಪರಾರಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅಕ್ಟೋಬರ್ 18ರಂದು ಮಧ್ಯಾಹ್ನ 2.30ರ ಸುಮಾರಿನಲ್ಲಿ ಅನುಶಾ ವಲ್ಲೂರಿ ಎಂಬವರು ಜಯನಗರ 2ನೇ ಬ್ಲಾಕ್‍ನ ತಮ್ಮ ಪಿಜಿಯಿಂದ ಕಚೇರಿಗೆ ನಡೆದು ಹೋಗುತ್ತಿದ್ದರು. ಈ ಸಮಯದಲ್ಲಿ ಹಿಂದಿನಿಂದ ಸ್ಕೂಟರ್‍ನಲ್ಲಿ ಬಂದಿ ಇಬ್ಬರು ದರೋಡೆಕೋರರು ಮೊಬೈಲ್ […]