ಪೊಲೀಸರ ಸೋಗಿನಲ್ಲಿ ಕಿಡ್ನಾಪ್, ದರೋಡೆ ಪ್ರಕರಣ : ಐವರು ಆರೋಪಿಗಳ ಸೆರೆ

ಬೆಂಗಳೂರು, ಜ.15- ಪೊಲೀಸರ ಸೋಗಿನಲ್ಲಿ ಎಂಜನಿಯರ್ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಇಬ್ಬರು ರೌಡಿಗಳು ಸೇರಿದಂತೆ ಐವರು ಆರೋಪಿಗಳನ್ನು ಮಹಾಲಕ್ಷ್ಮೀಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 31ರಂದು ಹೊಸ ವರ್ಷದ ಮುನ್ನಾ ದಿನ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮಹಾಲಕ್ಷ್ಮೀಪುರಂನ ಎರಡನೇ ಹಂತದ ಆದಿತ್ಯ ಹೋಟೆಲ್ ಹಿಂಭಾಗದಲ್ಲಿ ವಾಸವಿರುವ ಇಂಜಿನಿಯರ್ ಡಿ.ಸಾಮ್ಯನಾಯ್ಕ್ ಅವರ ಮನೆಗೆ ತಿಪಟೂರು ಪೊಲೀಸ್ ಠಾಣೆಯ ಕ್ರೈಮ್ ಬ್ರಾಂಚ್‍ನವರು ಎಂದು ಹೇಳಿಕೊಂಡು 4-5 ಮಂದಿ ಅಪರಿಚಿತರು ನುಗ್ಗಿದರು. ಚಾಕು ತೋರಿಸಿ ಬೆದರಿಸಿ ಮನೆಯಲ್ಲಿಟ್ಟಿದ್ದ 19 […]