ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಮಾಡಿದ್ದ ಐವರ ಬಂಧನ

ಬೆಂಗಳೂರು,ಜ.28-ಆದಾಯ ತೆರಿಗೆ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಮನೆಗೆ ನುಗ್ಗಿ ಹಣ ಹಾಗೂ ಪಿಸ್ತೂಲ್‍ನ್ನು ದರೋಡೆ ಮಾಡಿದ್ದ ಐದು ಮಂದಿ ದರೋಡೆಕೋರರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿ 1.7 ಲಕ್ಷ ನಗದು ಹಾಗೂ ಎರಡು ಪಿಸ್ತೂಲ್ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಜ.23ರಂದು ಬೆಳಗ್ಗೆ 8.45ರ ಸುಮಾರಿಗೆ ಅಪರಿಚಿತರು ಮನೆಯೊಂದರ ಬಳಿ ಹೋಗಿ ಆದಾಯ ತೆರಿಗೆ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಮನೆಯನ್ನು ಪರಿಶೀಲಿಸಬೇಕೆಂದು ಹೇಳಿ ಮನೆಯ ವಾರ್ಡ್‍ರೂಬ್‍ನಲ್ಲಿಟ್ಟಿದ್ದ ದಾಖಲಾತಿಗಳನ್ನು ನೋಡಿದ್ದಾರೆ. ನಂತರ ವಾರ್ಡ್‍ರೂಬ್ ಲಾಕರ್‍ನಲ್ಲಿಟ್ಟಿದ್ದಂತಹ 3.5 ಲಕ್ಷ ರೂ. ಹಾಗೂ ಒಂದು ಪಿಸ್ತೂಲ್‍ನ್ನು […]