ಪಂಜಾಬ್‍ನ ಪೊಲೀಸ್ ಠಾಣೆಯ ಮೇಲೆ ರಾಕೆಟ್ ಚಾಲಿತ್ ಗ್ರೇನೆಡ್ ದಾಳಿ

ತರ್ನ್‍ತರಣ್, ಡಿ.10- ಪಂಜಾಬ್‍ನ ಮತ್ತೊಂದು ಪೊಲೀಸ್ ಠಾಣೆಯ ಮೇಲೆ ರಾಕೇಟ್ ಚಾಲಿತ್ ಗ್ರೇನೆಡ್ (ಆರ್‍ಪಿಜಿ) ದಾಳಿ ನಡೆದಿದೆ. ಪಂಜಾಬ್‍ನ ಉತ್ತರ ವಲಯದ ಮಝ ಪ್ರದೇಶದಲ್ಲಿನ ತರ್ನ್‍ತರಣ್ ನಗರದ ಸರ್ಹಾಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಿದೆ. ತಕ್ಷಣದ ವರದಿಯ ಪ್ರಕಾರ ಯಾವುದೇ ಆಸ್ತಿ ಮತ್ತು ಪ್ರಾಣ ಹಾನಿ ಸಂಭವಿಸಿಲ್ಲ. ಶನಿವಾರ ಮಧ್ಯರಾತ್ರಿ 1ಗಂಟೆ ಸುಮಾರಿಗೆ ಹಾರಿಸಲಾದ ಗ್ರೇನೆಡ್ ಠಾಣೆಯ ಹೊರಗಿನ ಪಿಲ್ಲರ್‍ಗೆ ಬಡಿದು ನೆಲಕ್ಕೆ ಅಪ್ಪಳಿಸಿದೆ. ಆದರೆ ಗ್ರೇನೆಡ್ ಸ್ಪೋಟಗೊಂಡಿಲ್ಲ. ಇದು ಪ್ರಬಲಶಾಲಿಯಾಗಿತ್ತು ಒಂದು ವೇಳೆ ಸ್ಪೋಟಗೊಂಡಿದ್ದರೆ […]