ರಾಜಧಾನಿ ಮಾಫಿಯಾ ಗ್ರಾಮಾಂತರಕ್ಕೆ ಶಿಫ್ಟ್ : ಹೆಡೆಮುರಿ ಕಟ್ಟುವರೇ ಅಲೋಕ್..?

ನೆಲಮಂಗಲ,ಜ.19- ಸಿಲಿಕಾನ್ ಸಿಟಿ ಸೆರಗಿನಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಫಿಯಾ ರಾಜಧಾನಿಯಾಗಿ ಬದಲಾಗುತ್ತಿದೆಯೇ? ಹೌದು… ಈ ಭಾಗದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳು, ಸ್ಕಿಲ್‍ಗೇಮ್‍ಗಳ ಹಾವಳಿ, ಇಸ್ಟಿಟ್ ಹಾಗೂ ಮಾಂಸದ ದಂಧೆಗಳು ಹಾಗೂ ರೌಡಿಸಂನಿಂದಾಗಿ ಇಂತಹ ಪರಿಸ್ಥಿತಿ ಬಂದೊದಗಿದೆ. ರಾಜಧಾನಿಗೆ ಹೊಂದಿಕೊಂಡಂತಿರುವ ಜಿಲ್ಲೆಯಲ್ಲಿ ಭೂಮಿ ಬೆಲೆಗೆ ಬೂಮ್ ಬಂದಿರುವುದರಿಂದ ರಿಯಲ್ ಎಸ್ಟೆಟ್ ಜತೆಗೆ ಮಟ್ಕಾ, ಜೂಜು, ಸ್ಕಿಲ್‍ಗೇಮ್‍ಗಳು, ಇಸ್ಟಿಟ್ ಅಡ್ಡೆಗಳು ಹಾಗೂ ಮಸಾಜ್ ಪಾರ್ಲರ್‍ಗಳು ಗ್ರಾಮಾಂತರ ಪ್ರದೇಶಗಳಿಗೆ ಶಿಫ್ಟ್ ಆಗಿವೆ. ಸಮಾಜದ ಕೊಳಕನ್ನು ತೊಳೆದು ಹಾಕಬೇಕಾದ ರಕ್ಷಕರೆ ಪರೋಕ್ಷವಾಗಿ […]