1 ಕೋಟಿ ಮೌಲ್ಯದ ಡ್ರಗ್ಸ್ ವಶ, 16 ನೈಜೀರಿಯನ್ನರನ್ನು ಬಂಧನ

ಥಾಣೆ,ಜ.1-ಮಹಾರಾಷ್ಟ್ರದ ನವಿ ಮುಂಬೈ ನಗರದಲ್ಲಿ ರೋ ಹೌಸ್‍ನಲ್ಲಿ ಒಂದು ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 16 ನೈಜೀರಿಯನ್ ಪ್ರಜೆಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸ ವರ್ಷದ ಕಾರ್ಯಕ್ರಮಗಳಲ್ಲಿ ಪೂರೈಕೆಗಾಗಿ ಕೆಲವು ಆಫ್ರಿಕನ್ನರು ಮಾದಕ ದ್ರವ್ಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬ ಸುಳಿವಿನ ಮೇರೆಗೆ ನಿನ್ನೆ ಮನೆಯ ಮೇಲೆ ದಾಳಿ ನಡೆಸಲಾಯಿತು ಎಂದು ನವಿ ಮುಂಬೈ ಪೊಲೀಸ್ ಉಪ ಕಮಿಷನರ್ (ಅಪರಾಧ) ಅಮಿತ್ ಕಾಳೆ ತಿಳಿಸಿದ್ದಾರೆ. ವಶಪಡಿಸಿಕೊಂಡ ಡ್ರಗ್ಸ್ 1,00,70,000 ರೂ ಮೌಲ್ಯದ ಗಾಂಜಾ, […]