ಟಿವಿ ಮೆಕ್ಯಾನಿಕ್ ಕುಟುಂಬಕ್ಕೆ ಬಂತು 12 ಲಕ್ಷ ವಿದ್ಯುತ್ ಬಿಲ್..!

ಪುದುಚೇರಿ, ಸೆ. 21- ದೇಶದ ವಿವಿಧ ರಾಜ್ಯಗಳಲ್ಲಿರುವ ವಿದ್ಯುತ್ ಪ್ರಸರಣ ಕಂಪೆನಿಗಳ ಎಡವಟ್ಟುಗಳು ಪದೇ ಪದೇ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳಿಗೆ ಗುರಿಯಾಗಿದ್ದು ಈಗ ಅಂತಹದೇ ಒಂದು ಪ್ರಕರಣವು ಪುದುಚೇರಿಯಲ್ಲಿ ನಡೆದಿದೆ.ಪುದುಚೇರಿಯ ವಿದ್ಯುತ್ ಇಲಾಖೆಯು ಟಿವಿ ಮೆಕಾನಿಕ್ ಒಬ್ಬರ ಕುಟುಂಬಕ್ಕೆ 12 ಲಕ್ಷ ರೂ.ಗಳ ವಿದ್ಯುತ್ ಬಿಲ್ ಅನ್ನು ನೀಡಿರುವುದೇ ಭಾರೀ ಎಡವಟ್ಟಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿವೆ. ಪುದುಚೇರಿಯ ವಿಶ್ವನಾಥ ನಗರದ ಶೇಖ್ ಜಾಹರ್ ರಸ್ತೆಯಲ್ಲಿ ವಾಸಿಸುತ್ತಿರುವ ಟಿವಿ ಮೆಕ್ಯಾನಿಕ್ ಶರವಣನ್ ಅವರಿಗೆ 12 ಲಕ್ಷದ 91 ಸಾವಿರದ […]