ಬ್ಯಾಂಕ್‍ನ ಸರ್ವರ್ ಹ್ಯಾಕ್ ಮಾಡಿ 12 ಕೋಟಿ ಲೂಟಿ..!

ಹೈದರಾಬಾದ್,ಜ.25-ಸೈಬರ್ ಕಳ್ಳರು ಸಹಕಾರಿ ಬ್ಯಾಂಕ್‍ವೊಂದರ ಸರ್ವರ್‍ಗಳನ್ನು ಹ್ಯಾಕ್ ಮಾಡಿ ಸುಮಾರು 12 ಕೋಟಿ ರೂ.ಗಳನ್ನು ಲೂಟಿ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್‍ನಲ್ಲಿ ನಡೆದಿದೆ. ಇದು ನಗರದಲ್ಲೇ ಅತಿದೊಡ್ಡ ಸೈಬರ್ ವಂಚನೆ ಪ್ರಕರಣವಾಗಿದೆ. ಸೈಬರ್ ಕಳ್ಳರು ಬ್ಯಾಂಕ್‍ನ ಸರ್ವರ್‍ಗಳನ್ನು ಹ್ಯಾಕ್ ಮಾಡಿದ ನಂತರ ಸುಮಾರು 100ಕ್ಕೂ ಹೆಚ್ಚು ಮುಖ್ಯ ಖಾತೆಗಳಿಗೆ ಲಾಗಿನ್ ಆಗಿರುವುದು ಮಾತ್ರವಲ್ಲದೆ ಆ ಖಾತೆಗಳಿಂದ 12 ಕೋಟಿ ರೂ.ಗಳನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಹೈದರಾಬಾದ್ ನಗರದಲ್ಲಿರುವ ಆಂಧ್ರಪ್ರದೇಶ ಮಹೇಶ್ ಕೋ ಆಪರೇಟಿವ್ ಬ್ಯಾಂಕ್‍ನ ಸರ್ವರ್‍ಗಳನ್ನು ಹ್ಯಾಕ್ […]