8.7 ಕೋಟಿ ಮೌಲ್ಯದ ಹೆರಾಯಿನ್ ವಶ

ಮಿಜೋರಾಂ.10- ಮಾದಕ ವಸ್ತು ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ವಿಶೇಷ ಪೊಲೀಸ್ ತಂಡ ಸುಮಾರು 8.70 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದೆ. ಮುಂಜಾನೆ ಪುಕ್ಪುಯಿ ಪ್ರದೇಶದ ಟ್ಲಾಂಗ್ ಸೇತುವೆ ಬಳಿ ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ 1.74 ಕೆಜಿ ಡ್ರಗ್ಸ್ ಅನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದೆ ಎಮದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಇಬ್ಬರು ಚಂಫೈನ ನಿವಾಸಿಗಳಾಗಿದ್ದು ಮಾದಕವಸ್ತು ನಿಯಂತ್ರಣ ಕಾಯ್ಧೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು ಕಾರ್ಯಾಚರಣೆಯಲ್ಲಿ […]