ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪುತ್ರನ ಮನೆಯಲ್ಲಿ 6 ಕೋಟಿ ಹಣ ಪತ್ತೆ

ಬೆಂಗಳೂರು,ಮಾ.3- ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರ ಮನೆಯಲ್ಲೂ ಮೂಟೆಗಳಲ್ಲಿ ಕಟ್ಟಿಡಲಾಗಿದ್ದ ಗರಿ ಗರಿ ನೋಟಿನ ಕಂತೆಗಳು ಪತ್ತೆಯಾಗಿವೆ. ಸಂಜಯನಗರದಲ್ಲಿರುವ ಪ್ರಶಾಂತ್ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಅವರ ಮನೆಯಲ್ಲಿ 6 ಕೋಟಿ ರೂ.ಗೂ ಹೆಚ್ಚಿನ ನಗದು ಪತ್ತೆಯಾಗಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ. ನಿರ್ದಿಷ್ಟ ದೂರು ಆಧರಿಸಿ ನಿನ್ನೆ ಪ್ರಶಾಂತ್ ಮಾಡಾಳ್ ಅವರಿಗೆ ಸೇರಿದ ಕೃಮಾರಕೃಪ ಸಮೀಪ ಇರುವ ಖಾಸಗಿ ಕಚೇರಿ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು 2.2 […]