903 ಕೋಟಿ ರೂ.ವಂಚನೆ : ಚೀನಿ, ತೈವಾನ್ ಪ್ರಜೆ ಸೇರಿದಂತೆ 10 ಮಂದಿ ಸೆರೆ

ಹೈದರಾಬಾದ್,ಅ.13- ಮತ್ತೊಂದು ಚೀನಾ ಆನ್‍ಲೈನ್ ಹೂಡಿಕೆ ವಂಚನೆ ಬಯಲಾಗಿದೆ. ಭಾರತ, ಚೀನಾ, ತೈವಾನ್, ಕಾಂಬೋಡಿಯಾ ಮತ್ತು ಯುಎಇಯಲ್ಲಿ ಚೀನಾ ಆಪ್ ಮೂಲಕ 903 ಕೋಟಿ ರೂ. ವಂಚನೆ ಮಾಡಿರುವ ಪ್ರಕರಣ ಬೇಧಿಸಿರುವ ಹೈದರಾಬಾದ್ ಪೊಲೀಸರು ಹತ್ತು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೀನಾ ಮೂಲದ ಲಿ ಜಾಂಗ್‍ಜುನ್ ಹಾಗೂ ತೈವಾನ್ ಪ್ರಜೆ ಚು ಚುನ್ ಯೂ ಪ್ರಕರಣದ ಪ್ರಮುಖ ರೂವಾರಿಗಳೆಂದು ಗುರುತಿಸಲಾಗಿದೆ. ಈ ವಂಚಕರಿಂದ ದೇಶದಾದ್ಯಂತ ಲಕ್ಷಗಟ್ಟಲೆ ಹೂಡಿಕೆದಾರರು ವಂಚನೆಗೆ ಒಳಗಾಗಿರಬಹುದು ಎಂದು ನಾವು ಅನುಮಾನಿಸುತ್ತೇವೆ. ದೆಹಲಿಯಲ್ಲಿಯೇ 10,000 […]