ಪೋಫೈಲ್ ಪಿಚ್ಚರ್ ಬದಲಿಸಿ ಟೀಕಿಸುವವರ ಬಾಯಿ ಮುಚ್ಚಿಸಿದ ಆರ್‌ಎಸ್‌ಎಸ್‌

ನವದೆಹಲಿ,ಆ.13- ಆಜಾದಿಕ ಅಮೃತ್ ಮಹೋತ್ಸವದ ಅಂಗವಾಗಿ ಸಾಮಾಜಿಕ ಜಾಲತಾಣ ಖಾತೆಯ ಪೋಫೈಲ್ ಪಿಚ್ಚರ್‍ಗಳಲ್ಲಿ ಆ.2ರಿಂದ 15ರವರೆಗೆ ತ್ರಿವರ್ಣ ಧ್ವಜ ಹಾಕುವಂತೆ ಪ್ರಧಾನಿ ನರೇದ್ರ ಮೋದಿ ಅವರ ಕರೆಗೆ ಸಂಘ ಪರಿವಾರ ಸ್ಪಂದಿಸಿದೆ. ಪ್ರತಿಪಕ್ಷಗಳ ತೀವ್ರ ಟೀಕೆ ಹಾಗೂ ಲೇವಡಿಗಳ ಹೊರತಾಗಿಯೂ ಆ.2ರಿಂದ ಈವರೆಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ಟ್ವೀಟರ್ ಪೋಫೈಲ್ ಪಿಚ್ಚರ್‍ನಲ್ಲಿ ಭಗದ್ ಧ್ವಜವೇ ಉಳಿದಿತ್ತು. ಸಂಸ್ಥೆಯ ಮುಖ್ಯಸ್ಥ ಮೋಹನ್ ಭಾಗವತ್ ಅವರು ಟ್ವೀಟರ್ ಖಾತೆಯಲ್ಲಿ ತಮ್ಮದೇ ಚಿತ್ರವನ್ನು ಹಾಕಿಕೊಂಡಿದ್ದರು. ಇದನ್ನು ಕಾಂಗ್ರೆಸ್ ಸೇರಿದಂತೆ […]