ದ್ವೇಷಭಾಷಣ ಖಂಡನಾರ್ಹ, ಶಿಕ್ಷಾರ್ಹ : ಇಂದ್ರೇಶ್‍ ಕುಮಾರ್

ನವದೆಹಲಿ,ಫೆ.3- ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಧರ್ಮಸಂಸದ್‍ನಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷಭಾಷಣ ಮಾಡಿದರೆನ್ನಲಾದವರನ್ನು ಆರ್‌ಎಸ್‌ಎಸ್‌ ಹಿರಿಯ ಧುರೀಣ ಇಂದ್ರೇಶ್‍ಕುಮಾರ್ ಖಂಡಿಸಿದ್ದಾರೆ. ಈ ಬಗೆಯ ಪ್ರಚೋದನಕಾರಿ ಮತ್ತು ಒಡಕನ್ನುಂಟು ಮಾಡುವ ಭಾಷಣಗಳನ್ನು ಮಾಡುವವರನ್ನು ಯಾವುದೇ ನಿನಾಯಿತಿ, ಮುಲಾಜಿಲ್ಲದೆ ಶಿಕ್ಷಿಸಬೇಕು ಎಂದು ಅವರು ಹೇಳಿದ್ದಾರೆ. ದ್ವೇಷ ರಾಜಕಾರಣ ಭ್ರಷ್ಟಾಚಾರಕ್ಕೆ ಸಮಾನ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ನುಡಿದ ಅವರು ಎಲ್ಲಾ ರಾಜಕೀಯ ಪಕ್ಷಗಳು ಹಗೆತನ ಬೆಳೆಸುವ ಕಾರ್ಯನಿಲ್ಲಿಸಬೇಕು ಮತ್ತು ಸಮಾಜದ ಒಂದು ವರ್ಗವನ್ನು ಮತ್ತೊಂದರ ಮೇಲೆ ಎತ್ತಿಕಟ್ಟುವ ಕೆಲಸ ಬಿಡಬೇಕು ಎಂದು […]