ಪಹಣಿ (RTC) ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ

ಬೆಂಗಳೂರು, ಮಾ.9- ರಾಜ್ಯದಲ್ಲಿರುವ ಬೀಳು ಜಮೀನು ಪ್ರಕರಣಗಳಲ್ಲಿ ಆರ್ ಟಿ ಸಿ ಯನ್ನು ತಿದ್ದುಪಡಿ ಮಾಡಲು ಮತ್ತೊಮ್ಮೆ ಅವಕಾಶ ನೀಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ವಿಧಾನ ಪರಿಷತ್ ನ ಪ್ರಶ್ನೋತ್ತರದಲ್ಲಿ ಜೆಡಿಎಸ್ ನ ಶ್ರೀಕಂಠೇಗೌಡರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದಲ್ಲಿ 1,08,09,018 ಎಕರೆ ಕಂದಾಯ ಬೀಳು ಜಮೀನುಗಳಿವೆ. 1966ರ ಕರ್ನಾಟಕ ಭೂ ಕಂದಾಯ ನಿಯಮ 119ದ ಪ್ರಕಾರ ಮೂರು ವರ್ಷದ ಕಂದಾಯ ಪಾವತಿ ಮಾಡದಿದ್ದರೆ ಅದನ್ನು ಬೀಳು ಭೂಮಿ ಎಂದು ಪಹಣಿಯಲ್ಲಿ ನಮೂದಿಸಲಾಗುತ್ತದೆ. […]