ನೂತನ RTO ಕಚೇರಿ ತೆರೆಯುವ ಪ್ರಸ್ತಾವನೆ ಇಲ್ಲ : ಶ್ರೀರಾಮುಲು

ಬೆಳಗಾವಿ,ಡಿ.21- ಇಲಾಖೆಗಳಲ್ಲಿ 30 ಸೇವೆಗಳನ್ನು ಆನ್‍ಲೈನ್ ಮೂಲಕವೇ ನೀಡುತ್ತಿರುವುದರಿಂದ ಹೊಸದಾಗಿ ಯಾವುದೇ ಭಾಗದಲ್ಲಿ RTO ಕಚೇರಿಗಳನ್ನು ತೆರೆಯುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು. ಶಾಸಕ ಸುಕುಮಾರ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, RTO ಕಚೇರಿಗಳಿಗೆ ಸಾರ್ವಜನಿಕರು ಡಿಸಿ ಮತ್ತು ಎಫ್‍ಸಿ ಸೇವೆ ಪಡೆಯಲು ಮಾತ್ರ ಬರುತ್ತಾರೆ. 30 ಸೇವೆಗಳನ್ನು ಆನ್‍ಲೈನ್‍ನಲ್ಲೇ ನೀಡುತ್ತಿರುವುದರಿಂದ ಆರ್‍ಟಿಒ ಕಚೇರಿಗಳನ್ನು ತೆರೆಯುವ ಪ್ರಸ್ತಾವನೆ ಇಲ್ಲ ಎಂದರು. ಸಾರ್ವಜನಿಕರ ಅನುಕೂಲಕ್ಕಾಗಿ ವಾಹನ್ ಫೋರ್, ಸಾರಥಿ ಫೋರ್, […]