ಅದಾನಿ ಕಂಪೆನಿಯಲ್ಲಿ ಸರ್ಕಾರಿ ಸಂಸ್ಥೆಗಳ ಹೂಡಿಕೆ ಚರ್ಚೆಗೆ ಪ್ರತಿಪಕ್ಷಗಳು ಪಟ್ಟು

ನವದೆಹಲಿ,ಫೆ.3- ಉದ್ಯಮಿ ಗೌತಮ್ ಅದಾನಿ ಕಂಪೆನಿಯಲ್ಲಿ ಸರ್ಕಾರಿ ಸೌಮ್ಯದ ಸಂಸ್ಥೆಗಳ ಬಂಡವಾಳ ಹೂಡಿಕೆಯಿಂದಾಗಿರುವ ನಷ್ಟಗಳ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿರುವುದರಿಂದ, ಸಂಸತ್‍ನ ಎರಡನೇ ದಿನದ ಕಲಾಪವೂ ವ್ಯರ್ಥವಾಗಿದೆ. ರಾಜ್ಯಸಭೆ ಮತ್ತು ಲೋಕಸಭೆ ಉಭಯ ಸದನಗಳು ಭೋಜನ ವಿರಾಮದವರೆಗೂ ಮುಂದೂಡಿಕೆಯಾಗಿವೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ನೇತೃತ್ವದಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ್ದು, ಸರ್ಕಾರದ ವಿರುದ್ಧದ ಹೋರಾಟಕ್ಕೆ ಪಣತೊಟ್ಟಿವೆ. ನಿನ್ನೆ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪದಲ್ಲೂ ಯಾವುದೇ ಚರ್ಚೆ ನಡೆಯದೆ ಸಮಯ ವ್ಯರ್ಥವಾಗಿತ್ತು. ಬೆಳಗ್ಗೆ […]