Russia-Ukraine Conflict : ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ

ಕ್ಯಿವ್, ಮಾ.5- ರಷ್ಯಾ-ಉಕ್ರೇನ್ ನಡುವಿನ ಯುದ್ಧ 10ನೇ ದಿನಕ್ಕೆ ತಲುಪಿದ್ದು, ಸಂತ್ರಸ್ತ ಭಾಗದ ಕೆಲವು ನಗರಗಳಿಂದ ಜನರನ್ನು ಸ್ಥಳಾಂತರಿಸಲು ರಷ್ಯಾ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದೆ. ಜೊತೆಗೆ ಪೂರ್ಣಪ್ರಮಾಣದ ಆಕ್ರಮಣಕ್ಕೆ ಹೆಚ್ಚುವರಿ ಸೇನೆಯನ್ನು ನಿಯೋಜಿಸಿದೆ. ನಿರಂತರ ದಾಳಿಯಿಂದ ಉಕ್ರೇನ್ ತತ್ತರಿಸಿದ್ದು, ಹತಾಶ ಸ್ಥಿತಿಗೆ ತಲುಪಿದೆ. ಇಂದು ಮಹತ್ವದ ಬೆಳವಣಿಗೆಯಲ್ಲಿ ರಷ್ಯಾ ಮಾನವೀಯ ದೃಷ್ಟಿಯಿಂದ ಎರಡು ನಗರಗಳ ಮೇಲಿನ ದಾಳಿಯನ್ನು 8 ಗಂಟೆಗಳ ಕಾಲ ಸ್ಥಗಿತಗೊಳಿಸಿದೆ. ರಷ್ಯಾದ ವಿದೇಶಾಂಗ ಸಚಿವರು ತಾತ್ಕಾಲಿಕ ಕದನ ವಿರಾಮವನ್ನು ಪ್ರಕಟಿಸಿದ್ದು, ಮಾಸ್ಕೋದ ಕಾಲಮಾನದಲ್ಲಿ […]