ಸಂಧಾನ ಮಾತುಕತೆ ನಡುವೆಯೂ ಉಕ್ರೇನ್ ಮೇಲೆ ಮುಂದುವರೆದ ರಷ್ಯಾ ದಾಳಿ

ನವದೆಹಲಿ, ಫೆ.28- ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ, ಅಂತರಾಷ್ಟ್ರೀಯ ಸಮುದಾಯದ ವಿರೋಧ, ಸಂಧಾನ ಮಾತುಕತೆ ಹೆಜ್ಜೆಗಳ ನಡುವೆಯೂ ರಷ್ಯಾ ತನ್ನ ನಿಲುವನ್ನು ಸಡಿಲಿಸದೆ ಉಕ್ರೇನ್ ಮೇಲಿನ ಆಕ್ರಮಣವನ್ನು ಮತ್ತಷ್ಟು ತೀವ್ರಗೊಳಿಸಿದೆ. ಎರಡು ದೇಶಗಳ ನಡುವಿನ ಯುದ್ಧ ಐದನೇ ದಿನಕ್ಕೆ ಕಾಲಿಟ್ಟಿದೆ. ಇಂದು ಉಕ್ರೇನ್ ದೇಶಾದ್ಯಂತ ವಾಯುದಾಳಿ, ಕ್ಷಿಪಣಿ ಪ್ರಯೋಗ, ಗುಂಡಿನ ಚಕಮಕಿ ಮುಂದುವರೆದಿದೆ. ಈ ವರೆಗಿನ ಹೋರಾಟದಲ್ಲಿ 352 ಉಕ್ರೇನ್ ನಾಗರೀಕರು ಮೃತಪಟ್ಟಿದ್ದು, ಎರಡು ಕಡೆ ಸಾಕಷ್ಟು ಜೀವ ಹಾನಿಯಾಗಿದೆ. ಅಪಾರ ಪ್ರಮಾಣ ಆಸ್ತಿ ನಷ್ಟವಾಗಿದ್ದು, ಉಕ್ರೇನ್‍ನಲ್ಲಿ ಜನ […]