ಕದನ ವಿರಾಮದ ನಂತರ ಮತ್ತೆ ಸಿಡಿದೆದ್ದ ಪುಟಿನ್ ಪಡೆ

ಮಾಸ್ಕೋ,ಮಾ.6- ಉಕ್ರೇನ್ ಯುದ್ಧದ ನಡುವೆ ನಿನ್ನೆ ಕದನ ವಿರಾಮ ಘೋಷಿಸಿ ನಾಗರಿಕರ ಸ್ಥಳಾಂತರಕ್ಕೆ ಅವಕಾಶ ನೀಡಿದ್ದ ರಷ್ಯಾ, ಇದ್ದಕ್ಕಿದ್ದಂತೆ ರೊಚ್ಚುಗೆದ್ದಿದ್ದು, ಯುದ್ಧದ ಭೀಕರತೆ ಮತ್ತಷ್ಟು ಹೆಚ್ಚಾಗಿದೆ.ಮರಿಯಾಪೋಲ್, ಒಲೊನೊಓಖಾ ನಗರಗಳಲ್ಲಿನ ಜನ ಸುರಕ್ಷಿತ ಸ್ಥಳಗಳಿಗೆ ತೆರಳಲು ನಿನ್ನೆ 4 ಗಂಟೆಗಳ ಕಾಲ ಆಕ್ರಮಣವನ್ನು ತಡೆ ಹಿಡಿದು ಮಾನವ ಕಾರಿಡಾರ್‍ಗೆ ಅವಕಾಶ ಮಾಡಿಕೊಡಲಾಗಿತ್ತು. ಮಾನವ ಕಾರಿಡಾರ್ ನಡುವೆ ರಷ್ಯಾ ಮಾತುತಪ್ಪಿ ಶೆಲ್ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ಉಕ್ರೇನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ತನ್ನ […]