ತೀರದ ರಷ್ಯನ್ನರ ರಕ್ತ ದಾಹ, ದೈತ್ಯ ರಾಷ್ಟ್ರದ ದಾಳಿಗೆ ನಲುಗಿದ ಉಕ್ರೇನ್

ನವದೆಹಲಿ, ಫೆ.28- ವಿಶ್ವ ಸಂಸ್ಥೆಯ ಸಾಮಾನ್ಯ ಅವೇಶನ, ಅಂತಾ ರಾಷ್ಟ್ರೀಯ ಸಮುದಾಯದ ವಿರೋಧ, ಸಂಧಾನ ಮಾತುಕತೆ ಹೆಜ್ಜೆಗಳ ನಡುವೆಯೂ ರಷ್ಯಾ ತನ್ನ ನಿಲುವನ್ನು ಸಡಿಲಿಸದೆ ಉಕ್ರೇನ್ ಮೇಲಿನ ಆಕ್ರಮಣವನ್ನು ಮತ್ತಷ್ಟು ತೀವ್ರಗೊಳಿಸಿದೆ. ಎರಡು ದೇಶಗಳ ನಡುವಿನ ಯುದ್ಧ ಐದನೇ ದಿನಕ್ಕೆ ಕಾಲಿಟ್ಟಿದೆ. ಇಂದು ಉಕ್ರೇನ್ ದೇಶಾದ್ಯಂತ ವಾಯುದಾಳಿ, ಕ್ಷಿಪಣಿ ಪ್ರಯೋಗ, ಗುಂಡಿನ ಚಕಮಕಿ ಮುಂದುವರೆಸಿದೆ. ಈವರೆಗಿನ ಹೋರಾಟದಲ್ಲಿ 352 ಉಕ್ರೇನ್ ನಾಗರೀಕರು ಮೃತಪಟ್ಟಿದ್ದು, ಎರಡು ಕಡೆ ಸಾಕಷ್ಟು ಜೀವ ಹಾನಿಯಾಗಿದೆ. ಅಪಾರ ಪ್ರಮಾಣ ಆಸ್ತಿ ನಷ್ಟವಾಗಿದ್ದು, ಉಕ್ರೇನ್ನಲ್ಲಿ […]