ಆರ್ಥಿಕ ಸಂಕಷ್ಟ ತಪ್ಪಿಸಿಕೊಳ್ಳಲು ರಷ್ಯಾ ಹೊಸ ಪ್ಲಾನ್

ಮಾಸ್ಕೋ, ಮಾ.1- ಉಕ್ರೇನ್ ಮೇಲೆ ಆಕ್ರಮಣ ಮಾಡಿ ಜಾಗತಿಕ ಪ್ರತಿರೋಧಕ್ಕೆ ಗುರಿಯಾಗಿರುವ ರಷ್ಯಾ ಆರ್ಥಿಕ ದಿವಾಳಿತನದಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ರಷ್ಯಾದ ಉದ್ಯಮಿಗಳು, ರಫ್ತು ಆಮದುಗಾರರು ತಮ್ಮಲ್ಲಿರುವ ವಿದೇಶಿ ವಿನಿಮಯದ ಶೇ.80ರಷ್ಟನ್ನು ರಷ್ಯಾದ ರುಬೆಲ್‍ಗೆ ಪರಿವರ್ತನೆ ಮಾಡಿಕೊಳ್ಳುವಂತೆ ಕರೆ ನೀಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಾಮಾನ್ಯ ಅಧಿವೇಶನ, ಯೂರೋಪಿಯನ್ ಒಕ್ಕೂಟ ಸೇರಿದಂತೆ ಹಲವಾರು ಸಂಸ್ಥೆಗಳು ಮತ್ತು ಜಾಗತಿಕ ರಾಷ್ಟ್ರಗಳು ಯುದ್ಧ ನಿಲ್ಲಿಸುವಂತೆ, ಬೇಷರತ್ತಾಗಿ ಸೇನೆ ಹಿಂಪಡೆಯುವಂತೆ ರಷ್ಯಾದ ಮೇಲೆ ಒತ್ತಡ ಹೇರುತ್ತಿದೆ. ಕೆಲವು ರಾಷ್ಟ್ರಗಳು ರಷ್ಯಾದ […]