ರಷ್ಯನ್ನರ ನಿರಂತರ ದಾಳಿಗೆ ಉಕ್ರೇನ್ ಚಲ್ಲಾಪಿಲ್ಲಿ

ಕ್ಯಿವ್, ಮಾ.5- ರಷ್ಯಾದ ನಿರಂತರ ಸೆಲ್ ದಾಳಿಯಿಂದ ಯುದ್ಧಪೀಡಿತ ಉಕ್ರೇನ್ ಒತ್ತಡಕ್ಕೆ ಒಳಗಾಗಿದ್ದು, ಹತಾಶ ಸ್ಥಿತಿಯತ್ತ ಧಾವಿಸುತ್ತಿದೆ. ಕ್ಯಿವ್, ಖರ್ಕೀವ್, ಮುರಿಯೋಪೋಲ್ ಸೇರಿದಂತೆ ಪ್ರಮುಖ ನಗರಗಳು ಛಿದ್ರವಾಗಿದ್ದು, ಸ್ಮಶಾನ ಸದೃಶವಾಗಿವೆ. ಈಗಾಗಲೇ ಖೆರೋಸನ್ ನಗರ ರಷ್ಯನ್ನರ ಪಾಲಾಗಿದೆ. ಖಾರ್ಕೀವ್ ನ ವಶಕ್ಕಾಗಿ ಹೋರಾಟ ನಡೆಯುತ್ತಿದೆ. ರಾಜಧಾನಿ ಕ್ಯಿವ್‍ನಲ್ಲಿ ರಣಭೀಕರ ಪರಿಸ್ಥಿತಿ ಇದ್ದು ಹಾದಿಬೀದಿಯಲ್ಲಿ ಮೃತದೇಹಗಳು ಸಿಗುತ್ತಿವೆ. ಮರಿಯುಪೋಲ್ ಕೂಡ ದಾಳಿಗೆ ಒಳಗಾಗಿದೆ. ಈಶಾನ್ಯ ಉಕ್ರೇನ್‍ನ ನಗರ ಸುಮಿ ಪ್ರದೇಶದಲ್ಲಿ ವಿದೇಶಿ ಯರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ಆರೋಪಗಳು ಕೇಳಿಬಂದಿವೆ. […]