ಪಾಕಿಸ್ತಾನದಲ್ಲಿ ಹಿಂದೂಗಳ ಮನೆ ನೆಲಸಮ

ರಾವಲ್ಪಿಂಡಿ,ಜ.30-ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯವಾದ ಹಿಂದೂ ಮತ್ತು ಕ್ರಿಶ್ಚಿಯನ್‍ನರ ಮನೆಗಳನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಕಂಟೋನ್ಮೆಂಟ್ ಪ್ರದೇಶದಲ್ಲಿ ಸುಮಾರು 70 ವರ್ಷದಿಂದ ವಾಸಿಸುತ್ತಿದ್ದ ಹಿಂದೂ ಹಾಗು ಕ್ರಿಶ್ಚಿಯನ್ ಕುಟುಂಬ ಮತ್ತು ಶಿಯಾಗಳಿಗೆ ಸೇರಿದ ಕನಿಷ್ಠ ಐದು ಮನೆಗಳನ್ನು ನೆಲಸಮ ಮಾಡಲಾಗಿದ್ದು, ಸಾಮಾನು, ಸರಂಜಾಮುಗಳನ್ನು ಅಕ್ಕಪಕ್ಕದ ಬೀದಿಗಳಲ್ಲಿ ಎಸೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಮೀಪದ ದೇವಾಲಯವೊಂದರಲ್ಲಿ ಆಶ್ರಯ ಪಡೆಯುವಂತೆ ಹಿಂದೂ ಕುಟುಂಬಕ್ಕೆ ಒತ್ತಾಯಿಸಲಾಗಿದೆ. ಆದರೆ ಕ್ರಿಶ್ಚಿಯನ್ ಕುಟುಂಬ ಮತ್ತು ಶಿಯಾಗಳು ಯಾವುದೇ ಆಶ್ರಯವಿಲ್ಲದೆ ಬದುಕುವಂತೆ ಪೀಡಿಸಲಾಗಿದೆ. ಸಂತ್ರಸ್ತ ಕುಟುಂಬಗಳು ನ್ಯಾಯಾಲಯದಿಂದ […]