ಗಮನ ಸೆಳೆದ ಸಚಿನ್-ಬಿಲ್‍ಗೇಟ್ಸ್ ಭೇಟಿ

ಮುಂಬೈ,ಮಾ.1- ತಮ್ಮ ಪತ್ನಿ ಅಂಜಲಿ ಅವರೊಂದಿಗೆ ಮೈಕ್ರೋಸಾಫ್ಟ್ ಸಂಸ್ಥೆ ಸಂಸ್ಥಾಪಕ ಬಿಲ್‍ಗೇಟ್ಸ್ ಅವರನ್ನು ಭೇಟಿಯಾಗಿರುವ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಮಹತ್ವದ ಮಾತುಕತೆ ನಡೆಸಿದ್ದಾರೆ. ಮಕ್ಕಳ ಆರೋಗ್ಯ ರಕ್ಷಣೆಗೆ ಸಂಬಂಸಿದಂತೆ ಶ್ರಮಿಸುತ್ತಿರುವ ಬಿಲ್‍ಗೇಟ್ಸ್ ಅವರೊಂದಿಗೆ ನಡೆಸಿದ ಚರ್ಚೆ ಖುಷಿ ತಂದಿದೆ ಎಂದು ಸಚಿನ್ ಅವರು ಬಿಲ್‍ಗೇಟ್ಸ್ ಅವರೊಂದಿಗಿರುವ ಛಾಯಾಚಿತ್ರವನ್ನು ಟ್ವಿಟ್ ಮಾಡಿ ಗಮನ ಸೆಳೆದಿದ್ದಾರೆ. ನಾವೆಲ್ಲರೂ ಜೀವನಕ್ಕಾಗಿ ವಿದ್ಯಾರ್ಥಿಗಳಾಗಿದ್ದೇವೆ. ನಮ್ಮ ಫೌಂಡೇಶನ್ ಕೆಲಸ ಮಾಡುವ ಮಕ್ಕಳ ಆರೋಗ್ಯ ಸೇರಿದಂತೆ – ಲೋಕೋಪಕಾರದ ದೃಷ್ಟಿಕೋನಗಳನ್ನು ಪಡೆಯಲು ಇಂದು […]