ಚಿರತೆ ಸೆರೆ ಹಿಡಿಯಲು ಬೆಳಗಾವಿಗೆ ಆಗಮಿಸಿದ ಸಕ್ರೆಬೈಲ್ ಆನೆಗಳು

ಬೆಳಗಾವಿ, ಆ.24- ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತ, ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತ ನಗರದ ಜನರ ನಿದ್ದೆಗೆಡಿಸಿರುವ ಚಿರತೆ ಸೆರೆಗಾಗಿ ಸಕ್ರೆಬೈಲ್‍ನಿಂದ ಆನೆಗಳ ತಂಡ ಆಗಮಿಸಿದೆ. ಆ.5ರಿಂದ ನಗರದ ಕ್ಲಬ್ ರಸ್ತೆಯ ಗಾಲ್ ಮೈದಾನದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗಾಗಿ ಎಲ್ಲ ಕಸರತ್ತು ನಡೆಸಿದರೂ ಪ್ರಯೋಜನವಾಗಲಿಲ್ಲ. ಚಿರತೆ ಟ್ರ್ಯಾಪ್‍ಗಾಗಿ ಗಾಲ್‍ಕ್ಲಬ್ ಮೈದಾನದಲ್ಲಿ ಟ್ರ್ಯಾಪ್ ಕ್ಯಾಮೆರಾ ಅಳವಡಿಸಿದ್ದರು. ಅದರಲ್ಲಿ ಇಣಕಿ ನೋಡಿ ಮಾಯವಾಗುತ್ತಿತ್ತು. ಮತ್ತೆ ಕಳೆದ 22ರಂದು ಇಂಡಲಗ ರಸ್ತೆಯಲ್ಲಿರುವ ವನಿತಾ ವಿದ್ಯಾಲಯದ ಡಬ್ಬಲ್ […]