ವಾಸ್ತು ಸರಿಯಿಲ್ಲ, ಕುರ್ಚಿ ಬೇರೆಡೆಗೆ ಸ್ಥಳಾಂತರಿಸಿ : ಸಲೀಂ ಅಹಮ್ಮದ್

ಬೆಂಗಳೂರು, ಫೆ.14- ಸರ್ಕಾರ ತಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳುತ್ತಿಲ್ಲ. ಬಹುಶಃ ನಾನು ಕುಳಿತ ಸ್ಥಳದ ವಾಸ್ತು ಸರಿ ಇಲ್ಲವಾಗಿರಬಹುದು, ನನ್ನ ಕುರ್ಚಿಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ ಎಂದು ಕಾಂಗ್ರೆಸ್ ಸದಸ್ಯ ಸಲೀಂ ಅಹಮ್ಮದ್ ಒತ್ತಾಯಿಸಿದ ಸ್ವಾರಸ್ಯಕರ ಪ್ರಸಂಗ ನಡೆಯಿತು. ವಿಧಾನ ಪರಿಷತ್ನಲ್ಲಿ ಸಲೀಂ ಅಹಮ್ಮದ್, ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ, ಹಿಂಸೆ, ಲೈಂಗಿಕ ಶೋಷಣೆಗಳ ಕುರಿತು ಮಾಹಿತಿ ಕೇಳಿದ್ದರು. ಆ ಪ್ರಶ್ನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೃಹ ಇಲಾಖೆಗೆ […]