ಕೆಲಸಕ್ಕಿದ್ದ ಜ್ಯುವೆಲರಿ ಅಂಗಡಿಯನ್ನೇ ದೋಚಿದ್ದ ಸೇಲ್ಸ್ ಮ್ಯಾನ್ ಸೇರಿ ಇಬ್ಬರ ಸೆರೆ

ಬೆಂಗಳೂರು,ಜು.18- ಕೆಲಸ ಮಾಡಿಕೊಂಡಿದ್ದ ಜ್ಯುವೆಲರಿ ಅಂಗಡಿಯಲ್ಲೇ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಸೇಲ್ಸ್‍ಮ್ಯಾನ್ ಸೇರಿದಂತೆ ಇಬ್ಬರನ್ನು ಯಶವಂತಪುರ ಠಾಣೆಪೊಲೀಸರು ಬಂಧಿಸಿ 26.25 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕಾರು, ಬೈಕ್ ವಶಪಡಿಸಿಕೊಂಡಿದ್ದಾರೆ. ಚೇತನ್ ನಾಯಕ್ ಮತ್ತು ಈತನ ಸ್ನೇಹಿತ ವಿಜಯ್ ಬಂಧಿತ ಆರೋಪಿಗಳು. ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ 1ನೇ ಮುಖ್ಯರಸ್ತೆಯಲ್ಲಿ ದಿ ಬೆಸ್ಟ್ ಜ್ಯುವೆಲರಿ ಎಂಬ ಅಂಗಡಿ ಇದೆ. ಈ ಅಂಗಡಿಯಲ್ಲಿ ಚೇತನ್ ನಾಯಕ್ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದನು. ಗ್ರಾಹಕರೊಬ್ಬರು ಚಿನ್ನದ ಸರವನ್ನು ಆರ್ಡರ್ […]