ಮಳೆಗಾಲ ಮುಗಿದ ಬಳಿಕ ಮರಳಿನ ನಿಕ್ಷೇಪ ಹಂಚಿಕೆ : ಹಾಲಪ್ಪ ಆಚಾರ್

ಬೆಂಗಳೂರು,ಸೆ.30- ಮಳೆಗಾಲ ಮುಗಿದ ಕೂಡಲೇ ಮರಳಿನ ನಿಕ್ಷೇಪಗಳನ್ನು ಹಂಚಿಕೆ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಕನ್ನಡ ಭಾಗದ 15 ಜಿಲ್ಲೆಗಳನ್ನು ಹಟ್ಟಿ ಚಿನ್ನದ ಗಣಿ ನಿಗಮಕ್ಕೆ ಹಾಗೂ ದ.ಕರ್ನಾಟಕದ 15 ಜಿಲ್ಲೆಗಳನ್ನು ರಾಜ್ಯ ಖನಿಜ ನಿಗಮಕ್ಕೆ ನೀಡಲಾಗಿದ್ದು, ಈವರೆಡೂ ನಿಗಮಗಳ ಮೂಲಕ ಮರಳು ನಿಕ್ಷೇಪ ಹಂಚಿಕೆಯಾಗಲಿದೆ. ಪ್ರತಿ ಟನ್ಗೆ 800 ರೂ. ನಿಗದಪಡಿಸಲಾಗಿದೆ. ಹರಿಯುವ ನೀರಿನಲ್ಲಿ ಮರಳು ತೆಗೆಯುವುದನ್ನು ನಿಷೇಸಲಾಗಿದೆ. ರಾಜ್ಯಕ್ಕೆ ವಾರ್ಷಿಕ 45 ದಶಲಕ್ಷ […]