“ಸರ್ಕಾರ ಸಂತ ಶಿಶುನಾಳ ಶರೀಫರ ಹುಟ್ಟುಹಬ್ಬ ಆಚರಿಸಲಿ”

ಬೆಂಗಳೂರು,ಫೆ.28-ಕನ್ನಡದ ತತ್ವಪದಗಳಿಗೆ ವಿಶಿಷ್ಟ ಛಾಪು ಮೂಡಿಸಿ, ಜನಮನದಲ್ಲಿ ಅಚ್ಚೊತ್ತಿರುವ ಸಂತ ಶಿಶುನಾಳ ಶರೀಫರು ಸೌಹಾರ್ದತೆಯ ಸಂಕೇತವಾಗಿದ್ದು ಅವರ ಹುಟ್ಟುಹಬ್ಬವನ್ನು ಸರ್ಕಾರ ಆಚರಿಸಬೇಕು ಎಂದು ರಂಗೋತ್ರಿ ಸಂಸ್ಥಾಪಕ ಅಧ್ಯಕ್ಷ ಕೆ.ಎಚ್. ಕುಮಾರ ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರ, ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟ ( ಟ್ರಸ್ಟ್ ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು. ಸಹಕಾರದೊಂದಿಗೆ ಲಿಂಗರಾಜಪುರದ ನಾಟ್ಯ ರಂಜಿನಿ ಕಲಾಕ್ಷೇತ್ರ ಹಮ್ಮಿಕೊಂಡಿದ್ದ ಸಂತ ಶಿಶುನಾಳ ಶರೀಫರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು. […]