ಭಾರತ್ ಜೋಡೋ ಯಾತ್ರೆಯ ವೇಳೆ ಮೃತಪಟ್ಟಿದ್ದ ಸಂಸದ ಸಂತೋಕ್‍ಸಿಂಗ್ ಅಂತ್ಯಕ್ರಿಯೆ

ಚಂಡೀಗಢ,ಜ.15- ಭಾರತ್ ಜೋಡೋ ಯಾತ್ರೆಯ ವೇಳೆ ಹೃದಯಾಘಾತದಿಂದ ನಿಧನರಾದ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಜಲಂರ್ಧ ಜಿಲ್ಲೆಯ ಅವರ ಹುಟ್ಟೂರಾದ ಧಲಿವಾಲ್ ಗ್ರಾಮದಲ್ಲಿ ನಡೆಸಲಾಯಿತು. ಎರಡು ಬಾರಿ ಸಂಸದರಾಗಿದ್ದ 76 ವರ್ಷದ ಸಂತೋಖ್ ಶನಿವಾರ ಪಂಜಾಬ್‍ನ ಫಿ¯್ಲರ್Ëನಲ್ಲಿ ಯಾತ್ರೆಯಲ್ಲಿ ಭಾಗವಹಿಸಿದ್ದಾಗ ನಿಧನರಾದರು. ಅವರ ಸಾವಿನ ನಂತರ ಯಾತ್ರೆಯನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಚೌಧರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾಗ ಪ್ರಜ್ಞೆ ತಪ್ಪಿದರು. ಅವರನ್ನು ಫಗ್ವಾರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ […]