ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ದೂರು : ಶೀಘ್ರ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ

ಬೆಂಗಳೂರು, ಜ.27- ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ನೀಡಿದ್ದ ಸುಳ್ಳು ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಈಗಾಗಲೇ ಪ್ರಕರಣದಲ್ಲಿ ಆರೋಪ ಹೊತ್ತಿರುವ ಕಾಟನ್‍ಪೇಟೆ ಇನ್ಸ್ ಪೆಕ್ಟರ್ ಪ್ರವೀಣ್ ಅವರನ್ನು ಅಮಾನತುಗೊಳಿಸಿ ಹೇಳಿಕೆ ಕೂಡ ದಾಖಲಿಸಿಕೊಂಡಿದ್ದು, ಈ ಸಂಬಂಧ ತನಿಖೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು. ನಕಲಿ ಅಂಕಪಟ್ಟಿ ದಂಧೆ: ಕಾಲೇಜು, ಶಿಕ್ಷಣ […]

ಸ್ಯಾಂಟ್ರೋ ರವಿ ಬೆಳೆಸಿದ್ದೇ ಎಚ್ಡಿಕೆ, ಕಾಂಗ್ರೆಸ್ : ಅರಗ ಜ್ಞಾನೇಂದ್ರ

ಬೆಂಗಳೂರು,ಜ.24- ನ್ಯಾಯಾಂಗ ಬಂಧನದಲ್ಲಿ ರುವ ರೌಡಿಶೀಟರ್ ಸ್ಯಾಂಟ್ರೊ ರವಿಯನ್ನು ಬೆಳೆಸಿದ್ದೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ. ಸ್ಯಾಂಟ್ರೊ ರವಿ ಜೊತೆ ಇನ್ನು ಸಾಕಷ್ಟು ಮಂದಿ ಸರ್ಕಾರದಲ್ಲಿರುವ ಸಚಿವರು ಸಂಪರ್ಕದಲ್ಲಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಜ್ಞಾನೇಂದ್ರ, ಆತನನ್ನು ಬೆಳೆಸಿದ್ದೇ ಕುಮಾರಸ್ವಾಮಿ, ಈಗ ಯಾವ ನೈತಿಕತೆ ಇಟ್ಟುಕೊಂಡು ಆರೋಪ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಆತನನ್ನು ಕಾಂಗ್ರೆಸ್ನವರು ಬೆಳೆಸಿರಬಹುದು ಇಲ್ಲವೇ ಕುಮಾರಸ್ವಾಮಿ ಬೆಳೆಸಿರಬಹುದು. ಆದರೆ ನಮ್ಮ […]

ಸ್ಯಾಂಟ್ರೋ ರವಿ ಪ್ರಕರಣ ಮುಚ್ಚಿ ಹಾಕಲು ಯತ್ನ : ಸಿದ್ದರಾಮಯ್ಯ ಆರೋಪ

ಮೈಸೂರು,ಜ.21- ಸ್ಯಾಂಟ್ರೋ ರವಿ ಪ್ರಕರಣವನ್ನು ಮುಚ್ಚಿ ಹಾಕಲು ರಾಜ್ಯ ಸರ್ಕಾರ ಯತ್ನಿಸುತ್ತಿದ್ದು, ಆತನನ್ನೂ ಸರಿಯಾಗಿ ವಿಚಾರಣೆ ನಡೆಸಿದರು ಸರ್ಕಾರದ ಮತ್ತಷ್ಟು ಬಣ್ಣ ಬಯಲಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿಯನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ. ವಿಚಾರಣೆ ಮಾಡಿದರೆ ತಮ್ಮ ಬಣ್ಣ ಬಯಲಾಗುತ್ತೆ ಎಂದು ಸರ್ಕಾರ ಅವನ ರಕ್ಷಣೆ ಮಾಡುತ್ತಿದೆ. ಸ್ಯಾಂಟ್ರೋ ರವಿ ಒಬ್ಬ ಕುಖ್ಯಾತ ಕ್ರಿಮಿನಲ್. ಆತ ಅತ್ಯಾಚಾರ ಪ್ರಕರಣದಲ್ಲಿದ್ದಾನೆ, ಪಿಂಪ್ ಆಗಿ ಕೆಲಸ ಮಾಡಿದ್ದಾನೆ, ವರ್ಗಾವಣೆ […]

ಪಾರದರ್ಶಕ ತನಿಖೆಗೆ ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವಹಿಸಲಾಗಿದೆ: ಆರಗ ಜ್ಞಾನೇಂದ್ರ

ಬೆಂಗಳೂರು, ಜ.17- ವಿವಿಧ ಆರೋಪಗಳಿರುವ ಸ್ಯಾಂಟ್ರೋ ರವಿ ಪ್ರಕರಣದ ಬಗ್ಗೆ ಯಾವುದೇ ಅನುಮಾನಗಳು ಬಾರದಂತೆ ಮತ್ತು ಮತ್ತಷ್ಟು ಪಾರದರ್ಶಕವಾಗಿ ತನಿಖೆ ನಡೆಸಲು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಈ ಸಂಬಂಧ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮೈಸೂರು ಪೊಲೀಸರು ಈ ಪ್ರಕರಣದ ತನಿಖೆ ಮಾಡುತ್ತಿದ್ದರು. ತನಿಖೆ ಮತ್ತಷ್ಟು ಪಾರದರ್ಶಕವಾಗಿ ನಡೆಯಲು ಮತ್ತು ಯಾವುದೇ ಅನುಮಾನ ಈ ಪ್ರಕರಣದಲ್ಲಿ ಬಾರದಂತೆ ತನಿಖೆ ಮಾಡಲು ಸಿಐಡಿಗೆ ವಹಿಸಲಾಗಿದೆ. ಪಿಎಸ್‍ಐ ಪ್ರಕರಣ ತನಿಖೆ ಮಾಡಿದ ತಂಡವೇ […]

ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ದೂರು ದಾಖಲು

ಮೈಸೂರು, ಜ.17- ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ದೂರನ್ನು ಆತನ ಪತ್ನಿ ನೀಡಿದ್ದು ಇನ್ನೊಂದು ಕೇಸು ದಾಖಲಾಗಿದೆ. ಮೈಸೂರಿನ ದೇವರಾಜ ಪೋಲಿಸ್ ಠಾಣೆಯಲ್ಲಿ ಸ್ಯಾಂಟ್ರೊ ರವಿ ವಿರುದ್ಧ ಸಂತ್ರಸ್ತ ಪತ್ನಿ ಪೋಲಿಸರಿಗೆ ದೂರು ನೀಡಿದ್ದಾರೆ. 2022ರ ಸೆಪ್ಟೆಂಬರ್ 22 ರಂದು ನಾನು ಮೈಸೂರಿನ ದೇವರಾಜ ಮಾರುಕಟ್ಟೆಗೆ ಹೋಗಿದ್ದೆ. ಆಗ ನನ್ನ ಸ್ಕೂಟರ್ ಡಿಕ್ಕಿಯಲ್ಲಿ ಚೆಕ್ ಬುಕ್ ಇಟ್ಟಿದ್ದೆ, ಸ್ಯಾಂಟ್ರೊ ರವಿ ಮತ್ತು ಪ್ರಕಾಶ್ ಸ್ಕೂಟರ್ ಡಿಕ್ಕಿ ಹೊಡೆದು ಚೆಕ್ ಬುಕ್ ಕಳುವು ಮಾಡಿದ್ದಾರೆ ಎಂದು ಆಕೆ ದೂರಿನಲ್ಲಿ […]

ಸ್ಯಾಂಟ್ರೊ ರವಿ ಪ್ರಕರಣವನ್ನು ಸಿಐಡಿಗೆ ವಹಿಸಿ ಸರ್ಕಾರ ಆದೇಶ

ಬೆಂಗಳೂರು,ಜ.16-ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿದ್ದ ಸ್ಯಾಂಟ್ರೊ ರವಿ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ಕಳೆದ ಮೂರು ದಿನಗಳ ಹಿಂದೆ ಗುಜರಾತ್‍ನ ಅಹಮಾದಾಬಾದ್‍ನಲ್ಲಿ ಬಂಧನಕ್ಕೊಳಪಟ್ಟು ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಪ್ರಕರಣವನ್ನು ಸಿಐಡಿ ತನಿಖೆ ಆದೇಶ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಧಿಅಕಾರಿಗಳ ವರ್ಗಾವಣೆ, ಮಾನವ ಕಳ್ಳಸಾಗಾಣಿಕೆ, ವಂಚನೆ, 2ನೇ ಪತ್ನಿ ಮೇಲೆ ಅತ್ಯಾಚಾರ ಆರೋಪ ಸೇರಿದಂತೆ ಹಲವಾರು ಪ್ರಕರಣಗಳು ಈತನ ಮೇಲಿದೆ. ಈತನ ಮೇಲೆ […]

ಸ್ಯಾಂಟ್ರೋ ರವಿ ಆಮಿಷಕ್ಕೆ ಒಳಗಾಗುವಂತ ಪ್ರಸಂಗ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ

ಬೆಂಗಳೂರು, ಜ.16- ಸ್ವಚ್ಚ ರಾಜಕಾರಣ ದಲ್ಲಿ ನಾನು ಬದ್ಧತೆ ಹೊಂದಿದ್ದು, ಸಮಾಜದ್ರೋಹಿಗಳೂ ಮತ್ತು ಪೀಡಕರಿಂದ ಅಕ್ರಮವಾಗಿ ಹಣ ಗಳಿಸಬೇಕಾದ ಸಂದರ್ಭ ಬಂದರೆ ಬದುಕಲು ಇಚ್ಛಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಬೆಂಗಳೂರಿನ ಮಲೆನಾಡು ಮಿತ್ರ ವೃಂದ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಯಾಂಟ್ರೊ ರವಿಯಂಥ ವ್ಯಕ್ತಿಗಳಿಂದ ಆಮಿಷಕ್ಕೆ ಒಳಗಾಗುವಂಥ ಪ್ರಸಂಗ ಬಂದರೆ ಸಾವನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ. ನನ್ನ ಗುಜರಾತ್ ಪ್ರವಾಸಕ್ಕೂ, ಸ್ಯಾಂಟ್ರೋ ರವಿ ಬಂಧನಕ್ಕೂ ಥಳುಕು ಹಾಕಿ […]

ಕೇರಳದ ಗಡಿಯಲ್ಲಿ ಸ್ಯಾಂಟ್ರೋ ರವಿಗೆ ತೀವ್ರ ಶೋಧ

ಬೆಂಗಳೂರು, ಜ.12- ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಹಾಗೂ ಕೇರಳ ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ ಸ್ಯಾಂಟ್ರೊ ರವಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಸ್ಯಾಂಟ್ರೊ ರವಿ ಕಾರು ಚಾಲಕರು, ಸ್ನೇಹಿತರು, ಪರಿಚಯಸ್ಥರು ಹಾಗೂ ಆತನ ಬಳಗವನ್ನು ಪೊಲೀಸರು ಸಂಪರ್ಕಿಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಈತ ತಲೆಮರೆಸಿಕೊಂಡಿದ್ದು, ಆಗಾಗ್ಗೆ ಜಾಗ ಬದಲಿಸುತ್ತಿರುವುದರಿಂದ ಪೊಲೀಸರಿಗೆ ಈತನ ಬಂಧನ ಸವಾಲಾಗಿದೆ. ಏಳೆಂಟು ಜಿಲ್ಲೆಗಳಲ್ಲಿ ಆತನ ಶೋಧ ಕಾರ್ಯ ನಡೆಸುತ್ತಿರುವ ಪೊಲೀಸರು ಕೇರಳ ಹಾಗೂ ಕರ್ನಾಟಕ ಗಡಿ ಭಾಗಗಳಲ್ಲಿ ಹದ್ದಿನ […]

ರಾಜ್ಯಪಾಲರ ಅಂಗಳ ತಲುಪಿದ ಸ್ಯಾಂಟ್ರೋ ರವಿ ಪ್ರಕರಣ

ಬೆಂಗಳೂರು,ಜ.12- ಸ್ಯಾಂಟ್ರೋ ರವಿ ಪ್ರಕರಣ ಈಗ ರಾಜಭವನದ ಮೆಟ್ಟಿಲೇರಿದೆ. ಪ್ರಕರಣ ದಾಖಲಾದ ಬಳಿಕವೂ ಆರೋಪಿಯನ್ನು ಬಂಧಿಸಲು ರಾಜ್ಯ ಸರ್ಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ, ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ಅಥವಾ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದ್ದು, ಭ್ರಷ್ಟಚಾರ, ಪೊಲೀಸ್ ಅಧಿಕಾರಿಗಳ ವರ್ಗಾವಣೆ, ಅಕ್ರಮ ಹಣ ವಹಿವಾಟು, ಅನೈತಿಕ ಚಟುವಟಿಕೆ, ಅತ್ಯಾಚಾರ, ಅತಿಥಿ ಗೃಹವನ್ನು ದುರ್ಬಳಕೆ ಮಾಡಿಕೊಂಡ ಮಂಜುನಾಥ್ ಕೆ.ಎಸ್. ಅಲಿಯಾಸ್ ರವಿ ಅಲಿಯಾಸ್ ಸ್ಯಾಂಟ್ರೋ […]

ವಿವಾಹವಾಗುವುದೇ ಸ್ಯಾಂಟ್ರೊ ರವಿ ಚಾಳಿ

ಮೈಸೂರು, ಜ.11- ಸ್ಯಾಂಟ್ರೊ ರವಿಗೆ ಮದುವೆ ಅಂದರೆ ಲೆಕ್ಕವೆ ಇಲ್ಲ. ವಿವಾಹ ಆಗುವುದೇ ಇವನ ವೃತ್ತಿ ಎಂದರೆ ತಪ್ಪಾಗಲಿಕ್ಕಿಲ್ಲ. ಯುವತಿಯರನ್ನು ನಂಬಿಸುವುದು, ಮದುವೆ ಆಗುವುದು ಇವನ ಚಾಳಿಯಾಗಿದೆ. ವಿವಾಹವಾದ ಒಂದಷ್ಟು ದಿನ ಆಕೆಯೊಂದಿಗೆ ಸಂಸಾರ ಮಾಡಿ ನಂತರ ಆಕೆಯನ್ನು ಬೇರೊಬ್ಬರೊಟ್ಟಿಗೆ ಕಳುಹಿಸುತ್ತಿದ್ದ. ಇದೇ ಸ್ಯಾಂಟ್ರೊ ರವಿ ಮೂಲ ವೃತ್ತಿ ಆಗಿತ್ತು. ರವಿ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಯುವತಿಯರಿಗೆ ತಾಳಿ ಕಟ್ಟಿ ವಿವಾಹವಾಗುತ್ತಿದ್ದ. ಮದುವೆಗೆ ಸಾಕ್ಷಿ ಸಿಗದಂತೆ ನೋಡಿಕೊಳ್ಳುತ್ತಿದ್ದ. ಮಂಡ್ಯದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ನಂಬಿಸಿ ಸ್ಯಾಂಟ್ರೊ ರವಿ ಮದುವೆ […]