ಟಿಪ್ಪು ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ, ವಾದ ಮಂಡಿಸಿದ ರೇಣುಕಾಚಾರ್ಯ
ಬೆಂಗಳೂರು,ಆ.17- ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ವೀರ ಸಾರ್ವಕರ್ ಒಬ್ಬ ಅಪ್ಪಟ ದೇಶಪ್ರೇಮಿ, ಟಿಪ್ಪು ಸುಲ್ತಾನ್ ಓರ್ವ ದೇಶದ್ರೋಹಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಅಂಡಮಾನ್‍ನ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ವೀರ ಸಾರ್ವಕರ್ ಎಲ್ಲಿ? ಬ್ರಿಟಿಷರ ವಿರುದ್ಧ ಹೋರಾಟವನ್ನೇ ಮಾಡದ ಟಿಪ್ಪು ಸುಲ್ತಾನ್ ಒಬ್ಬ ಮತಾಂಧ ಎಂದು ಕಿಡಿಕಾರಿದರು. ಟಿಪ್ಪು ಸುಲ್ತಾನ್ ಎಂದಿಗೂ ಬ್ರಿಟಿಷರ ವಿರುದ್ಧ ಹೋರಾಟವನ್ನೇ ನಡೆಸಲಿಲ್ಲ.ಆತ ಮರಣ ಹೊಂದಿದ್ದು, 1799ರಲ್ಲಿ. ದೇಶದ […]