ಜೈಲಲ್ಲಿ AAP ಸಚಿವನ ದರ್ಬಾರ್ ಕುರಿತ ಮತ್ತೊಂದು ವಿಡಿಯೋ ರಿಲೀಸ್

ನವದೆಹಲಿ,ನ.26-ದೆಹಲಿಯ ಅಮ್ ಆದ್ಮಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಜೈಲಿನಲ್ಲಿರುವ ನಡೆಸುತ್ತಿರುವ ಕಾರುಬಾರಿನ ಬಗ್ಗೆ ಬಿಜೆಪಿ ಶನಿವಾರ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಸತ್ಯೇಂದ್ರ ಜೈನ್ ಜೊತೆ ತಿಹಾರ್ ಜೈಲಿನ ಅಧೀಕ್ಷಕರು ಬಂದು ಮಾತನಾಡುತ್ತಿರುವುದು ಹಾಗೂ ಇತರರ ಜೊತೆ ಜೈನ್ ಮಿನಿ ಸಭೆಯನ್ನು ನಡೆಸಿರುವುದು ಸ್ಪಷ್ಟವಾಗಿದೆ. ಸಿಸಿಟಿವಿಯ ದೃಶ್ಯಾವಳಿಗಳು ಸೆಪ್ಟೆಂಬರ್ ತಿಂಗಳಿನ ಕಾಲಮಾನಕ್ಕೆ ಸೇರಿವೆ ಎಂದು ಹೇಳಲಾಗಿದೆ. ಜೈಲಿನಲ್ಲಿ ಸತ್ಯೇಂದ್ರ ಜೈನ್ ಅವರಿಗೆ ಐಷಾರಾಮಿ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಈ ಕಾರಣಕ್ಕಾಗಿ ಜೈಲಿನ ಅೀಧಿಕ್ಷಕ ಅಜಿತ್‍ಕುಮಾರ್ […]