ISSF World Cup : 10 ಮೀಟರ್ ಏರ್ ಪಿಸ್ತೂಲ್‍ನಲ್ಲಿ ಭಾರತಕ್ಕೆ ಚಿನ್ನ

ಕೈರೋ,ಮಾ.3- ಐಎಸ್‍ಎಸ್‍ಎಫ್ ವಿಶ್ವ ಕಪ್ ಕ್ರೀಡಾಕೂಟದಲ್ಲಿ ಭಾರತದ ವನಿತೆಯರು 10 ಮೀಟರ್ ಏರ್ ಪಿಸ್ತೂಲ್‍ನಲ್ಲಿ ಚಿನ್ನದ ಪದಕವನ್ನು ಗೆದ್ದು ಸಂಭ್ರಮಿಸಿದೆ. 10 ಮೀಟರ್ ಏರ್ ಪಿಸ್ತೂಲ್‍ನ ಪ್ರಶಸ್ತಿ ಸುತ್ತಿನಲ್ಲಿ ಭಾರತದ ರೈಫಲ್ಸ್‍ಗಳಾದ ಶ್ರೀ ನಿವೇತಾ, ಇಶಾ ಸಿಂಗ್ ಹಾಗೂ ರುಚಿತಾ ವಿನೇರ್‍ಕರ್ ಅವರು 574 ಅಂಕಗಳನ್ನು ಕಲೆ ಹಾಕುವ ಮೂಲಕ ಸ್ವರ್ಣ ಪದಕವನ್ನು ಗೆದ್ದುಕೊಂಡಿದೆ. ಈ ಸುತ್ತಿನಲ್ಲಿ ಭಾರತದ ಶೂಟರ್‍ಗಳಿಗೆ ಪ್ರಬಲ ಪೈಪೋಟಿ ನೀಡಿದ ಜರ್ಮನಿಯ ಆಂಡ್ರಿಯಾ ಕತ್ರಿನಾ ಹೆಕ್‍ನೆರ್, ಸಂದ್ರಾ ರಿಟಿಜ್ ಮತ್ತು ಕರೀನಾ ವಿಮ್ಮರ್ […]