24 ಗಂಟೆಗಳಲ್ಲಿ ಉಕ್ರೇನ್‍ನಿಂದ ವಾಪಸ್ಸಾದ 1377 ಭಾರತೀಯರು

ನವದೆಹಲಿ.ಮಾ.2- ಕಳೆದ 24 ಗಂಟೆ ಗಳಲ್ಲಿ ಭಾರತ 1,377 ನಾಗರಿಕರನ್ನು ಯುದ್ಧಪೀಡಿತ ಉಕ್ರೇನ್‍ನಿಂದ ಸ್ಥಳಾಂತರಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇಂದು ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಪೋಲೆಂಡ್‍ನಿಂದ ಮೊದಲ ವಿಮಾನಗಳು ಸೇರಿದಂತೆ ಆರು ವಿಮಾನಗಳು ಈಗ ಭಾರತಕ್ಕೆ ಹೊರಟಿವೆ. ಉಕ್ರೇನಿಂದ 1377 ಭಾರತೀಯ ಪ್ರಜೆಗಳನ್ನು ವಾಪಸ್ ಕರೆದೊಯ್ದಿದ್ದಾರೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಉಕ್ರೇನ್‍ನಲ್ಲಿರುವ ಭಾರತೀಯರನ್ನು ಸ್ಥಳಾಂತರಿಸಲು ಪ್ರಾರಂಭಿಸಲಾದ ಆಪರೇಷನ್ ಗಂಗಾ ಅಡಿಯಲ್ಲಿ, ಭಾರತವು ಮುಂದಿನ ಮೂರು ದಿನಗಳಲ್ಲಿ 26 ಕ್ಕೂ ಹೆಚ್ಚು ವಿಮಾನಗಳನ್ನು […]